ಬಿಜೆಪಿ ಬಿಡುಗಡೆ ಮಾಡಲು ಹೊರಟಿದ್ದು 6 ವರ್ಷದ ಹಿಂದಿಯ ವಿಡಿಯೋ : ಕಾಶಂಪುರ

ಈ ಸುದ್ದಿಯನ್ನು ಶೇರ್ ಮಾಡಿ

Bandeppa-Kashyampur--01
ಬೆಂಗಳೂರು, ಫೆ.11- ಬಿಜೆಪಿಯವರು ನಮ್ಮ ಪಕ್ಷದ ವಿರುದ್ಧ ಏನೇನು ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಇಂದಿಲ್ಲಿ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪ್ರಸ್ತಾಪವಾಗಿರುವ ವಿಚಾರ 6ವರ್ಷದ ಹಿಂದಿನದ್ದು.

ಈಗಾಗಲೇ ಆ ಬಗ್ಗೆ ಚರ್ಚೆ ಆಗಿದೆ ಆದರೆ ಇದೀಗ ಅದನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ ಅದೇ ಏನೇನು ಬಿಡುಗಡೆ ಮಾಡುತ್ತಾರೆ ಮಾಡಲಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಆಡಿಯೋದಲ್ಲಿದ್ದ ಧ್ವನಿ ತಮ್ಮದೆಂದು ಒಪ್ಪಿಕೊಂಡಿದ್ದಾರೆ.

ಅವರು ಆಪರೇಷನ್ ಕಮಲ ಕೈ ಬಿಟ್ಟು ರಾಜ್ಯದಲ್ಲಿ 156ತಾಲೂಕುಗಳು ಬರಪೀಡಿತವಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಆ ಬಗ್ಗೆ ಚರ್ಚೆ ಮಾಡಲಿ ಎಂದರು.
ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ 1900ಕೋಟಿ ರೂ. ಬಿಡುಗಡೆ ಆಗಿದ್ದು 4ಲಕ್ಷ ರೈತರು ಪ್ರಯೋಜ ಪಡೆದಿದ್ದಾರೆ.

ಮತ್ತೆ ಶೀಘ್ರವಾಗಿ ಹಣ ಬಿಡುಗಡೆ ಮಾಡಲಾಗುವುದು. ಆದರೂ ಕೂಡ ಪ್ರಧಾನಿಯವರು ತಪ್ಪು ಮಾಹಿತಿಯನ್ನು ರೈತರ ಸಾಲಮನ್ನಾ ವಿಚಾರದಲ್ಲಿ ನೀಡುತ್ತಿದ್ದಾರೆ. ಜೆಪಿಯವರು ಅವರಿಗೆ ಯಾವ ರೀತಿ ಮಾಹಿತಿ ನೀಡುತ್ತಿದ್ದಾರೋ ಏನೋ ಗೊತ್ತಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin