ಯಡಿಯೂರಪ್ಪನವರ ಮಾತುಗಳಿಗೆ ನಾನು ತಲೆಕಡಿಸಿಕೊಳ್ಳಲ್ಲ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

H-D-revanna

ಹಾಸನ, ಫೆ.11-ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಂಡ್ ಟೀಂ ಆಪರೇಷನ್ ಕಮಲ ಮಾಡಲಿ ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ. ಏನ್ಬೇಕಾದರೂ ಮಾತನಾಡಲಿ ಅವರ ಹೇಳಿಕೆಗಳನ್ನು ನಿರ್ಲಕ್ಷಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಡೆ-ನುಡಿ ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ಹಾಗಾಗಿ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು.

ಜೆಡಿಎಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯುವ ಸಂಬಂಧ ಕುರಿತು ಆಡಿಯೋ ಬಿಡುಗಡೆ ನಂತರ ಈ ವಿಚಾರದಲ್ಲಿ ಕುಮಾರಸ್ವಾಮಿಯವರು ಮಿಮಿಕ್ರಿ ಮಾಡಿದ್ದಾರೆ ಎಂದಿದ್ದ ಬಿಎಸ್‍ವೈ ಮತ್ತೆ ನಾನೇ ಮಾತನಾಡಿದ್ದು ಎಂದಿರುವುದು ಸರಿಯೇ? ಎಂದು ಪ್ರಶ್ನಿಸಿದರು.

ಮೊಬೈಲ್ ಆಡಿಯೋ ರೆಕಾರ್ಡ್ ಯಾರೇ ಮಾಡಿದ್ದರೂ, ಇವರೇಕೆ ಮಾತನಾಡಲು ಹೋದರು? ಅವರು ಮಾತನಾಡಿರುವುದು ತಪ್ಪಲ್ಲವೇ? ಅವರು ಏನೇ ಮಾಡಿದರೂ ನಮ್ಮ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಇದೆಲ್ಲವನ್ನು ಬಿಟ್ಟು ರಾಜ್ಯದಲ್ಲಿ ಬರಗಾಲವಿದೆ. ಆ ಬಗ್ಗೆ ಚಿಂತೆ ಮಾಡಲಿ ಎಂದರು.

ರಾಜ್ಯದ 156 ತಾಲೂಕುಗಳಲ್ಲಿ ಬರಗಾಲವಿದ್ದು, ಇದನ್ನುಸಮರ್ಥ ರೀತಿಯಲ್ಲಿ ಎದುರಿಸಲು ನಾವು 3 ಸಾವಿರ ಕೋಟಿ ಹಣವನ್ನು ಕೇಂದ್ರದಿಂದ ನೆರವು ಕೇಳಿದ್ದೆವು. ಆದರೆ ನಮಗೆ ಕೇವಲ 900 ಕೋಟಿ ರೂ. ಮಾತ್ರ ಹಣ ನೀಡಿರುವ ಕೇಂದ್ರಸರ್ಕಾರ, ನೆರೆಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ಅನುದಾನ ನೀಡಿದೆ ಎಂದು ವಾಗ್ದಾಳಿ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿಯೂ ಸಹ ಸಾವಿರಾರು ಕೋಟಿ ಅನುದಾನ ಬರಬೇಕಿದೆ. ಹೀಗಿದ್ದೂ ರಾಜ್ಯ ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ವೋಟು ಕೇಳುತ್ತಾರೆ.

ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿರುವ ಕೊಡುಗೆ ಏನು ಎಂಬುದು ನಾಡಿನ ಜನ ಅರ್ಥ ಮಾಡಿಕೊಳ್ಳಬೇಕು. ಬರಗಾಲ, ಬಡವರ ಚಿಂತೆ ಮಾಡುವುದು ಬಿಟ್ಟು ದಿನ ಬೆಳಗಾದರೆ ಆಪರೇಷನ್ ಕಮಲದ ಚಿಂತೆಯಲ್ಲಿಯೇ ಮುಳುಗಿರುವುದು ಸರಿಯೇ ಎಂದು ಪ್ರಶ್ನಿಸಿದರು.

Facebook Comments

Sri Raghav

Admin