ಮೂವರು ಸರಗಳ್ಳರ ಬಂಧನ 9.5 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

policeಬೆಂಗಳೂರು, ಫೆ.11-ಸರಗಳ್ಳರ ಎಡೆಮುರಿಕಟ್ಟುತ್ತಿರುವ ಹೆಬ್ಬಾಳ ಪೊಲೀಸರು ಇದೀಗ ಮೂವರು ಸರಗಳ್ಳರನ್ನು ಬಂಧಿಸಿ 9.5ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಗವಾರದ ನಿವಾಸಿ ಸೈಫ್‍ಖಾನ್(28), ಹೆಗಡೆ ನಗರದ ಸಬ್ಧರ್ ಅಮದ್ (29) ಮತ್ತು ಗೋವಿಂದಪುರದ ನಯಾಬ್‍ರಸೂಲ್ (29) ಬಂಧಿತ ಸರಗಳ್ಳರು.

ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‍ಪಾಳ್ಯ ಮುಖ್ಯರಸ್ತೆಯಲ್ಲಿ ಜ.22ರಂದು ಬೆಳಗಿನ ಜಾವ 6 ಗಂಟೆಯಲ್ಲಿ ಶಂಕರಿ ಎಂಬುವರು ಆಟೋಗಾಗಿ ಕಾಯುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು ಇವರಿಗೆ ಚಾಕು ತೋರಿಸಿ ಬೆದರಿಸಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೆಬ್ಬಾಳ ಠಾಣೆ ಪೊಲೀಸರು ಸರಗಳ್ಳರಿಗಾಗಿ ವ್ಯಾಪಕ ಶೋಧ ಕೈಗೊಂಡು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 9.5 ಲಕ್ಷ ರೂ. ಮೌಲ್ಯದ 175 ಗ್ರಾಂ ಚಿನ್ನಾಭರಣ, ನಾಲ್ಕು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಹೆಬ್ಬಾಳ ಠಾಣೆಯ ಎರಡು ಸರಗಳ್ಳತನ ಪ್ರಕರಣ, ಒಂದು ಸುಲಿಗೆ, ಎರಡು ಹಗಲು ಮತ್ತು ರಾತ್ರಿ ಕಳ್ಳತನ, ಎರಡು ಬೈಕ್ ಕಳವು, ನಂದಿನಿಲೇಔಟ್ ವ್ಯಾಪ್ತಿಯ ಸುಲಿಗೆ ಪ್ರಕರಣ, ಜಾಲಹಳ್ಳಿ ಠಾಣೆಯ ಸರಗಳ್ಳತನ ಮತ್ತು ಎಚ್‍ಎಎಲ್ ಠಾಣೆಯ ಒಂದು ಸುಲಿಗೆ ಪ್ರಕರಣ ಪತ್ತೆಯಾದಂತಾಗಿದೆ.

ಯಶವಂತಪುರ ಉಪ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಖಾನ್ ಅವರನ್ನೊಳಗೊಂಡ ತಂಡ ಈ ಕಾರ್ಯಚರಣೆ ಕೈಗೊಂಡಿತ್ತು.

Facebook Comments