ರಸ್ತೆ ಬದಿ ಬಸ್ ಬಿಟ್ಟು ನಿದ್ದೆ ಮಾಡಲು ಹೋದ ಚಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

Bus--01

ತುಮಕೂರು, ಫೆ.11-ಚಾಲಕನಿಗೆ ನಿದ್ದೆ ಬಂದಿದ್ದಕ್ಕೆ ಪ್ರಯಾಣಿಕರಿದ್ದ ಬಸ್ಸನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋಗಿರುವ ಘಟನೆ ಎಪಿಎಂಸಿ ಬಳಿ ನಡೆದಿದೆ.

ಹೊಸಪೇಟೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‍ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ರಾತ್ರಿಯಿಂದ ವಾಹನ ಚಲಾಯಿಸಿದ ಚಾಲಕನಿಗೆ ನಿದ್ದೆ ಬಂದ ಕಾರಣ ಬಸ್ಸನ್ನು ರಸ್ತೆಬದಿಯಲ್ಲೇ ನಿಲ್ಲಿಸಿ ಹೋಗಿದ್ದಾನೆ.

ಎಷ್ಟು ಸಮಯವಾದರೂ ಚಾಲಕ ಬಾರದಿದ್ದನ್ನು ಕಂಡು ಆಕ್ರೋಶಗೊಂಡ ಪ್ರಯಾಣಿಕರು ನಿರ್ವಾಹಕನ ವಿರುದ್ಧ ಹರಿಹಾಯ್ದಿದ್ದಾರೆ. ಆನ್‍ಲೈನ್ ಮುಖಾಂತರ ಮುಂಗಡ ಟಿಕೆಟ್‍ಗಳನ್ನು ಬುಕ್ ಮಾಡಿಕೊಳ್ಳಲಾಗಿತ್ತು.

ಬಸ್ ಸಂಸ್ಥೆಗೆ ದೂರವಾಣಿಗೆ ಕರೆ ಮಾಡಿದರೂ ಕರೆಗಳನ್ನು ಯಾರೂ ಸ್ವೀಕರಿಸಲಿಲ್ಲ.  ನಂತರ ಕೆಲ ಪ್ರಯಾಣಿಕರು ಬೇರೆ ವಾಹನಗಳ ಮುಖಾಂತರ ತೆರಳಬೇಕಾಯಿತು.

Facebook Comments

Sri Raghav

Admin