ಭಾರೀ ಮಳೆಯಿಂದ 6 ಮನೆಗಳಿಗೆ ಹಾನಿ

ಈ ಸುದ್ದಿಯನ್ನು ಶೇರ್ ಮಾಡಿ

Chitradurgaಚಿತ್ರದುರ್ಗ,ಫೆ.11- ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ ಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟ ಗ್ರಾಮದ ಆರು ಮನೆಗಳು ಹಾನಿಗೀಡಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ರಾತ್ರಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿಯ ಶೀಟು ಕುಸಿದ ಪರಿಣಾಮ ರಂಗಪ್ಪ ಎಂಬವರ ಮೇಲೆ ಕಬ್ಬಿಣದ ತುಂಡು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ಬೀಸಿದ ಬಿರುಗಾಳಿಗೆ ನಾಗರಾಜಪ್ಪ, ಗೀತಮ್ಮ, ಗೋವಿಂದಪ್ಪ, ರಂಗಪ್ಪ, ಕರಿಯಮ್ಮ, ರೇಣುಕಮ್ಮ ಎಂಬವರ ಮನೆಗಳಿಗೂ ಹಾನಿಯಾಗಿದೆ.
ಮನೆಯ ಶೀಟ್‍ಗಳು ಹಾರಿ ಹೋದ ಕಾರಣ ಸಂತ್ರಸ್ತ ಕುಟುಂಬಗಳು ರಾತ್ರಿಯಿಡೀ ನಿದ್ದೆ ಇಲ್ಲದೆ ಪರದಾಡುವಂತಾಗಿದೆ.

ಅಷ್ಟೇ ಅಲ್ಲದೇ ಬಿರುಗಾಳಿ, ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಸಂತ್ರಸ್ತರು ಪರದಾಡಿದ್ದಾರೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Facebook Comments