ಐಸಿಸಿ ನೂತನ ರಾಂಕಿಂಗ್ ಪಟ್ಟಿ ಪ್ರಕಟ, 2ನೆ ಸ್ಥಾನಕ್ಕೇರಿದ ಕುಲ್‍ದೀಪ್

ಈ ಸುದ್ದಿಯನ್ನು ಶೇರ್ ಮಾಡಿ

Kuldeepದುಬೈ, ಫೆ.11- ನ್ಯೂಜಿಲೆಂಡ್ ವಿರುದ್ಧದ ಅಂತಿಮ 20- 20 ಪಂದ್ಯದಲ್ಲಿ ಸೋತು ಭಾರತ ಸರಣಿಕೊಂಡರೂ ಟೀಂ ಇಂಡಿಯಾದ ಸ್ಪಿನ್ನರ್ ಕುಲ್‍ದೀಪ್ ಯಾದವ್ ಐಸಿಸಿ ಪ್ರಕಟಿಸಿದ ನೂತನ ರಾಂಕಿಂಗ್‍ನಲ್ಲಿ ನಂಬರ್ 2 ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಸರಣಿ ಸೋಲುವ ಮೂಲಕ ನಿರಾಸೆ ಅನುಭವಿಸಿರುವ ಭಾರತ ತಂಡವು ರಾಂಕಿಂಗ್ ವಿಭಾಗದಲ್ಲಿ ನಂಬರ್ 2 ಸ್ಥಾನದಲ್ಲೇ ಮುಂದುವರೆದಿದೆ.

ನ್ಯೂಜಿಲೆಂಡ್ ಸರಣಿಯನ್ನು ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿ ಸರಣಿ ಶ್ರೇಷ್ಠರಾದ ಕಾಲಿನ್ ಮುನ್ರೊ ಐಸಿಸಿ ಪ್ರಕಟಿಸಿದ ರಾಂಕಿಂಗ್ ವಿಭಾಗದಲ್ಲಿ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದರೆ, ಟೀಂ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ (698 ಪಾಯಿಂಟ್ಸ್) 7ನೆ ಸ್ಥಾನ, ಕನ್ನಡಿಗ ಲೋಕೇಶ್ ರಾಹುಲ್ (677 ಪಾಯಿಂಟ್ಸ್) 10 ಸ್ಥಾನದಲ್ಲಿದ್ದರೆ, ಶಿಖರ್ ಧವನ್ (671) 11ನೆ ಸ್ಥಾನದಲ್ಲೇ ಮುಂದುವರೆದಿದ್ದಾರೆ.

ಟಾಪ್ 5 ತಂಡಗಳು:  ಪಾಕಿಸ್ತಾನ (135 ರೇಟಿಂಗ್), ಭಾರತ (124), ದಕ್ಷಿಣ ಆಫ್ರಿಕಾ (118), ಇಂಗ್ಲೆಂಡ್ (118), ಆಸ್ಟ್ರೇಲಿಯಾ (117).

ಬ್ಯಾಟ್ಸ್‍ಮನ್‍ಗಳು: ಕಾಲಿನ್ ಮುನ್ರೊ (ನ್ಯೂಜಿಲೆಂಡ್, 825 ಪಾಯಿಂಟ್ಸ್), ಆರೋನ್ ಪಿಂಚ್ (ಆಸ್ಟ್ರೇಲಿಯಾ, 806), ಇವಿನ್ ಲಿವೀಸ್ (ವೆಸ್ಟ್ ಇಂಡೀಸ್, 751), ಗ್ಲೇನ್ ಮ್ಯಾಕ್ಸ್‍ವೆಲ್ (ಆಸ್ಟ್ರೇಲಿಯಾ, 745).

ಟಾಪ್ 5 ಬೌಲರ್‍ಗಳು: ರಶೀದ್ ಖಾನ್ (ಆಫ್ಘಾನಿಸ್ತಾನ, 793 ರೇಟಿಂಗ್ಸ್), ಕುಲ್‍ದೀಪ್ ಯಾದವ್ (ಭಾರತ, 728), ಶಹಬಾದ್ ಖಾನ್ (ಪಾಕಿಸ್ತಾನ,720), ಇಮಾದ್ ವಾಸೀಮ್(ಪಾಕಿಸ್ತಾನ, 705), ಅದಿಲ್ ರಶೀದ್ (ಇಂಗ್ಲೆಂಡ್,676).

Facebook Comments