2030ರ ವೇಳೆಗೆ ವಿಶ್ವದ 2ನೇ ಬೃಹತ್ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01ಗ್ರೇಟರ್ ನೊಯಿಡಾ, ಫೆ.11- ಭಾರತವು ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, 2030ರ ವೇಳೆಗೆ ದೇಶವು ವಿಶ್ವದ 2ನೇ ಬೃಹತ್ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ಪೆಟ್ರೋಟೆಕ್-2019 ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಪ್ರಸ್ತತ ವಿಶ್ವದ ಆರನೇ ಬೃಹತ್ ಆರ್ಥಿಕ ರಾಷ್ಟ್ರವಾಗಿದೆ.

ಇನ್ನು 11 ವರ್ಷಗಲ್ಲಿ ನಮ್ಮ ದೇಶ 2ನೇ ಸ್ಥಾನಕ್ಕೇರಲಿದೆ ಎಂದರು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್ ಕೂಡ ಭಾರತ ಕ್ಷಿಪ್ರವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಎಂದು ಈಗಾಗಲೇ ತಿಳಿಸಿದೆ.

ವರ್ಷದಿಂದ ವರ್ಷಕ್ಕೆ ದೇಶದ ಆರ್ಥಿಕ ಪ್ರಗತಿ ಬೆಳೆಯುತ್ತಿದೆ. ಈಗ ಆರನೇ ಸ್ಥಾನದಲ್ಲಿರುವ ಭಾರತ 2030ರ ವೇಳೆಗೆ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ದೇಶ ಎಂದೆಂದೋ ಕಾಣದಂತಹ ಆರ್ಥಿಕ ಪ್ರಗತಿಯ ಸಾಧನೆಯ ದಾಪುಗಾಲತ್ತ ಭಾರತ ಸಾಗುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮೆಚ್ಚುಗೆ ಸೂಚಿಸಿವೆ. ಇದು ಭವಿಷ್ಯದ ದಿನಗಳಲ್ಲೂ ಕೂಡ ಇದೇ ವಿದ್ಯಮಾನದಲ್ಲಿ ಮುಂದುವರೆಯಲಿದೆ ಎಂದರು.

Facebook Comments