ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

Priyanka-gandhi-01

ಲಖ್ನೌ,ಫೆ.11- ಉತ್ತರ ಪ್ರದೇಶ ಪೂರ್ವ ಭಾಗದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಿಯಾಂಕ ಉತ್ತರ ಪ್ರದೇಶಕ್ಕೆ ಇಂದು ಭೇಟಿ ನೀಡಿದ್ದಾರೆ.

ಪ್ರಿಯಾಂಕಾ ಜೊತೆ ಪಶ್ಚಿಮ ಭಾಗದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಭೇಟಿ ನೀಡಿದ್ದಾರೆ.

ನಗರದ ರಸ್ತೆಯೊಂದರಲ್ಲಿ ಅಳವಡಿಸಿರೋ ಫ್ಲೆಕ್ಸ್‍ನಲ್ಲಿ ದುರ್ಗೆಯ ಅವತಾರದಲ್ಲಿ ಪ್ರಿಯಾಂಕಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಇತ್ತ ಪ್ರಿಯಾಂಕಾ ಭಾವಚಿತ್ರ ಇರುವ ಟಿ ಶರ್ಟ್‍ಗಳನ್ನು ಧರಿಸಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕಿಯ ಸ್ವಾಗತ ಕೋರಿದ್ದಾರೆ.

ಹೊಸ ಟ್ವಿಸ್ಟ್: ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿಯಾಗುತ್ತಿದ್ದಂತೆ ಉತ್ತರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಎಸ್ಪಿ ಹಾಗೂ ಬಿಎಸ್ಪಿ ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ಮರು ಪರಿಶೀಲನೆ ನಡೆಸುತ್ತಿದ್ದು, ಕಾಂಗ್ರೆಸ್‍ಗೆ 14 ಸೀಟುಗಳ ಆಫರ್ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಮೂಲ ಪ್ರಕಾರ ಎಸ್ಪಿ, ಬಿಎಸ್ಪಿ ಕಾಂಗ್ರೆಸ್ ಗೆ 30 ಸೀಟುಗಳನ್ನು ನೀಡಲು ಸಿದ್ಧವಿದ್ದು, ಜನವರಿ 12ರಂದು ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಒಪ್ಪಂದವನ್ನು ಅಧಿಕೃತಗೊಳಿಸಿದ್ದರು.

ಕಾಂಗ್ರೆಸ್ ಹೊರಗಿಟ್ಟು ಒಂದಾಗಿದ್ದ ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು 38-38 ಸೀಟುಗಳನ್ನು ಹಂಚಿಕೊಂಡಿದ್ದವು. ಹಾಗೆ ಕಾಂಗ್ರೆಸ್ ಜೊತೆ ಯಾವುದೇ ಒಪ್ಪಂದವಿಲ್ಲ ಎಂದು ಘೋಷಣೆ ಮಾಡಿದ್ದರು.

ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಂತೆ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಿಯಾಂಕಾ ವಾದ್ರರೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.

ಪ್ರಿಯಾಂಕಾ ಬರುತ್ತಿದ್ದಂತೆ ಮಾತು ಬದಲಿಸಿದ ಎಸ್ಪಿ ಹಾಗೂ ಬಿಎಸ್ಪಿ, ಕಾಂಗ್ರೆಸ್ ಜೊತೆ ಕೈಜೋಡಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.

Facebook Comments