ಶಿಕ್ಷಕಿ ಮೇಲೆ ಆ್ಯಸಿಡ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Acidರಾಂಚಿ, ಫೆ.11- ಶಾರದಾ ಪೂಜೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಶಿಕ್ಷಕಿಯೊಬ್ಬರ ಮೇಲೆ ಇಬ್ಬರು ಅಪರಿಚಿತರು ಆ್ಯಸಿಡ್ ದಾಳಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚರ್ಚ್ ಕಾಂಪ್ಲೆಂಕ್ಸ್ ಬಳಿ ಇರುವ ತಮ್ಮ ಮನೆ ಹತ್ತಿರ ಆಟೋದಲ್ಲಿ ಶಿಕ್ಷಕಿ ಬರುತ್ತಿದ್ದಾಗ ಮೋಟಾರ್ ಬೈಕ್ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

ತಕ್ಷಣ ಆಕೆಯನ್ನು ರಾಜೇಂದ್ರ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ದಾಳಿ ನಡೆಸಿರುವವರ ಪೈಕಿ ಒಬ್ಬನನ್ನು ಶ್ರವಣ್‍ಕುಮಾರ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

Facebook Comments