ಆಪರೇಷನ್ ಆಡಿಯೋ ಬಗ್ಗೆ ಎಸ್ಐಟಿ ತನಿಖೆಗೆ ಸ್ಪೀಕರ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಂಗಳೂರು,ಫೆ.11- ವಿವಾದಗ್ರಸ್ಥ ಧ್ವನಿಸುರುಳಿಯ ಬಗ್ಗೆ ವಿಶೇಷ ತನಿಖಾ ತಂಡ ರಚಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರಕ್ಕೆ ಸಲಹೆ ಮಾಡಿದರು.

ಧ್ವನಿಸುರುಳಿಯಲ್ಲಿ ತಮ್ಮ ಮೇಲೆ ಆರೋಪ ಮಾಡಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ವಿಸ್ತೃತ ಚರ್ಚೆಯಾದ ನಂತರ ಸಭಾಧ್ಯಕ್ಷರು ಈ ಸಲಹೆ ನೀಡಿದರು.
ಸರ್ಕಾರ ತಮ್ಮ ಸಲಹೆಯನ್ನೇ ನಿರ್ದೇಶನವೆಂದು ಪರಿಗಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ತನಿಖಾ ತಂಡದಿಂದ ಸತ್ಯಾಂಶ ಹೊರಬರುವಂತಾಗಲಿ. 15 ದಿನದೊಳಗೆ ನೆಮ್ಮದಿ ಕೊಡುವಂತಾಗಲಿ ಎಂದು ಅವರು ಹೇಳಿದರು.

ತಮ್ಮ ಮೂಲ ಸ್ವಭಾವಕ್ಕೆ ವಿರುದ್ಧವಾಗಿ ಸಭಾಧ್ಯಕ್ಷರ ಸ್ಥಾನದಲ್ಲಿ ಮುಂದುವರೆಯತ್ತಿರುವುದಾಗಿ ಹೇಳಿದ ಅವರು, ಪಕ್ಷಬೇಧ ಮರೆತು ಸದಸ್ಯರು ತಮ್ಮ ಮೇಲೆ ಅಪಾರ ವಿಶ್ವಾಸವನ್ನು ವ್ಯಕ್ತಪಡಿಸಿದ್ದೀರಿ. ಸದಸ್ಯರ ಭಾವನೆಗೆ ಋಣಿಯಾಗಿರುವುದಾಗಿ ತಿಳಿಸಿದರು.

ಬೀಚಿಯವರ ಆತ್ಮಚರಿತ್ರೆಯ ಕೆಲವೊಂದು ಮಾಹಿತಿಯನ್ನು ಉಲ್ಲೇಖಿಸಿದ ಅವರು, ವೇಶ್ಯೆಯೊಬ್ಬರು ಹಣ ಪಡೆಯದ ವಿಚಾರವನ್ನು ಪ್ರಸ್ತಾಪಿಸಿ ಅವರು ಕೂಡ ನೀತಿಬದ್ಧರಾಗಿರುತ್ತಾರೆ. ನಾವು ಹೀಗಾದೆವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವೈಯಕ್ತಿಕ ಪ್ರತಿಷ್ಠೆಗಿಂತ ಕರ್ತವ್ಯಪ್ರಜ್ಞೆ ತಮ್ಮನ್ನು ಬಂಧಿಸಿದೆ ಹೀಗಾಗಿ ವಿಚಲಿತರಾಗಿದ್ದರೂ ಬುದ್ದಿಗೆ ಹೆಚ್ಚು ಕೆಲಸ ನೀಡಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

ನಮ್ಮ ಮನೆಯಲ್ಲಿ ಎರಡು ದುರಂತವಾಗಿದೆ. ಇದು ಮತ್ತೊಂದು ವಿಚಾರ. ತಮ್ಮ ಪಾಲಿಗೆ ಬರೆದದ್ದು ಎಂದು ನೋವನ್ನು ತೋಡಿಕೊಂಡರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಂಬಿಗಸ್ಥ ಸಭಾಧ್ಯಕ್ಷರು ಬೇಕು ಎಂದಿದ್ದರು. ಅದಕ್ಕಿಂತ ದೊಡ್ಡ ಗೌರವ ಬೇಕಿಲ್ಲ ಎಂದು ಸಬಾಧ್ಯಕ್ಷರು ಒಂದು ಹಂತದಲ್ಲಿ ಹೇಳಿದರು.

ತಮ್ಮ ಮೇಲಿರುವ ಆರೋಪ ವಿರುವ ದನಿಸುರುಳಿ ಅಸಲಿಯೋ, ನಕಲಿಯೋ ಸ್ಪಷ್ಟವಾಗಲಿ. ಅದು ನಕಲಿಯಾದರೆ ಗೌರವದಿಂದ ಉಸಿರಾಡುತ್ತೇನೆ. ಧ್ವನಿಸುರುಳಿಯ ಸಂಭಾಷಣೆಯಲ್ಲಿ ತಮ್ಮ ಮೇಲೆ ಆರೋಪ ಬಂದಿರುವುದರಿಂದ ಯಾತನೆ ಅನುಭವಿಸುವಂತಾಗಿದೆ ಎಂದರು.

Facebook Comments

Sri Raghav

Admin