ಆಪರೇಷನ್ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿದ್ದರ ಕುರಿತು ಸ್ಪೀಕರ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01

ಬೆಂಗಳೂರು, ಫೆ.11-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ತಮಗೆ ಪತ್ರ ನೀಡಿ ಅದರೊಂದಿಗೆ ಕಳುಹಿಸಿರುವ ಧ್ವನಿಸುರುಳಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದು ತಮ್ಮನ್ನು ತುಂಬಾ ನೋವನ್ನು ಉಂಟುಮಾಡಿದೆ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷರು, ಪ್ರಶ್ನೋತ್ತರ ಕಲಾಪ ಆರಂಭಿಸಬೇಕಿದ್ದು, ವಿಶೇಷ ಸನ್ನಿವೇಶ ಸೃಷ್ಟಿಯಾಗಿರುವುದರಿಂದ ಕೆಲವು ವಿಚಾರ ಪ್ರಸ್ತಾಪಿಸಬೇಕಿದೆ.

ಫೆ.8 ರಂದು ಮಧ್ಯಾಹ್ನ 12.10ನಿಮಿಷಕ್ಕೆ ಮುಖ್ಯಮಂತ್ರಿಯವರು ತಮಗೆ ಪತ್ರ ಕಳುಹಿಸಿ ಅದರಲ್ಲಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿರುತ್ತಾರೆ. ಒಂದು ಧ್ವನಿಸುರುಳಿಯನ್ನೂ ಕಳುಹಿಸಿದ್ದಾರೆ.

ತಮ್ಮ ಬಗ್ಗೆ ಅಭಿಮಾನದ ಮಾತುಗಳನ್ನೂ ಮುಖ್ಯಮಂತ್ರಿ ಆಡಿದ್ದಾರೆ ಅದಕ್ಕಾಗಿ ಕೃತಜ್ಞತೆ ಸಲ್ಲಿಸಲಿದ್ದು, ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತೇನೆ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಸದನದ ಒಬ್ಬ ಹೆಸರು ಪ್ರಸ್ತಾಪಿಸಿ ಮತ್ತೊಬ್ಬರ ಸದಸ್ಯರ ಮಗನೊಂದಿಗೆ ಸಂಭಾಷಣೆ ನಡೆಸಿರುವ ಧ್ವನಿಸುರುಳಿ ಅದು. ಧ್ವನಿಸುರುಳಿಯಲ್ಲಿನ ಧ್ವನಿ ಸದಸ್ಯ ಯಾರೆಂಬುದು ನನಗೆ ಗೊತ್ತಿಲ್ಲ. ಸಭಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದೀರಿ.

ಅದಕ್ಕೆ ಅಪಚಾರವಾಗದಂತೆ ನಡೆದುಕೊಳ್ಳಲಾಗುವುದು. ಧ್ವನಿಸುರುಳಿಯಲ್ಲಿ ಮಾತನಾಡಿರುವವರು ರಮೇಶ್‍ಕುಮಾರ್ ಅವರಿಗೆ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ 50 ಕೋಟಿ ರೂ. ಹಣ ಸೇರಿಸಿದ್ದೇನೆ ಎಂಬ ರೀತಿಯಲ್ಲಿದೆ.
ಕೋರ್ಟ್ ವಿಚಾರವೂ ಹೇಳಲಾಗಿದೆ.

ದೇಶದ ಪ್ರಧಾನಿಯವರ ವಿಚಾರವೂ ಪ್ರಸ್ತಾಪವಾಗಿದೆ. ದೇಶಕ್ಕೆ ಮತ್ತು ಸಂಸತ್ತಿಗೆ ಇದು ಒಳ್ಳೆಯದಲ್ಲ. ತಾವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು ನೋವಿನ ಎರಡು ದಿನಗಳನ್ನು ಕಳೆಯಬೇಕಾಯಿತು. ಸತ್ಯ ಸಾಬೀತಾಗಬೇಕು.

ಯಾರು ವಿಚಾರಣೆ ಮೂಲಕ ಸಾಬೀತಾಗಬೇಕು.ಧ್ವನಿಸುರುಳಿಯಲ್ಲಿ ಮಾತನಾಡಿರುವವರು ನೇರವಾಗಿ ನನಗೆ, ನಮ್ಮ ಕುಟುಂಬಸ್ಥರ ಭೇಟಿ ಮಾಡಿದ್ದರೆ, ಇನ್ಯಾರಾದರೂ ಹೇಳಿದ್ದಾರೆ.

ಎಲ್ಲಿ ಕೊಟ್ಟಿದ್ದಾರೆ ಎಂಬುದೆಲ್ಲ ಬೇಕಾಗುತ್ತದೆ. ದೊಮ್ಮಲೂರಿನ ಬಾಡಿಗೆ ಮನೆಯಲ್ಲಿ ಬೋರ್ಡ್ ಕೂಡ ಹಾಕದೆ ಇದ್ದೇನೆ. ಅಷ್ಟು ಪ್ರಮಾಣ ಹಣ ಇಡಲು ಜಾಗಬೇಕಲ್ಲ ಎಂದು ನೋವಿನಿಂದ ನುಡಿದರು.

Facebook Comments

Sri Raghav

Admin