ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಗೆ ಟ್ರೇಡ್ ಯೂನಿಯನ್‍ಗಳ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

unorganizedನವದೆಹಲಿ,ಫೆ.11- ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಹೇಳಿರುವುದು ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರದ ಈ ಯೋಜನೆಯಿಂದ 40 ವರ್ಷ ಮೇಲ್ಪಟ್ಟ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಹೊರಗುಳಿಯಲಿದ್ದು, ಬೇರೆ ಪಿಂಚಣಿ ಯೋಜನೆಯಲ್ಲಿ ಇರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಅಲ್ಲದೆ ಫಲಾನುಭವಿ ಮೃತಪಟ್ಟ ಸಂದರ್ಭದಲ್ಲಿ ಸಂಗಾತಿ ಇದನ್ನು ಮುಂದುವರಿಸಬಹುದು. ಅಲ್ಲದೇ, 29 ವರ್ಷ ದಾಟಿದವರಿಗೆ ಮಾಸಿಕ 100 ರೂ, 40 ವರ್ಷವಾದವರು 200 ರೂ. ಪಾವತಿಸಬೇಕಾಗುತ್ತದೆ.

20 ವರ್ಷಗಳ ಬಳಿಕ ಮೊದಲ ಪಿಂಚಣಿ ದೊರೆಯಲಿದೆ. ಇಷ್ಟು ವರ್ಷಗಳ ಕಾಲ ಅಸಂಘಟಿತ ಕಾರ್ಮಿಕರು ಹಣವನ್ನು ಕಟ್ಟಬೇಕಿದೆ. ಅಲ್ಲದೇ, ಕಾರ್ಮಿಕರ ಹಣ ಸಂಗ್ರಹಿಸಿ ಖಾಸಗಿ ಕಂಪನಿಗಳಿಗೆ ನೀಡುವ ಉದ್ದೇಶ ಇದರ ಹಿಂದೆ ಇದೆ ಎಂದು ದೂರಲಾಗಿದೆ.

ಸಾಮಾಜಿಕ ಭದ್ರತೆ ಅಗತ್ಯ ಇರುವ ಕಾರ್ಮಿಕರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 40 ವರ್ಷದೊಳಗಿನ ಕಾರ್ಮಿಕರಿಗೆ ಮಾತ್ರ ಅನ್ವಯ ಎಂದು ಹೇಳುವ ಮೂಲಕ ಬಹುದೊಡ್ಡ ಸಂಖ್ಯೆಯ ಕಾರ್ಮಿಕರನ್ನು ಹೊರಗಿಡಲಾಗಿದೆ. 40 ವರ್ಷ ದಾಟಿದವರಿಗೆ ಇಂತಹ ಪಿಂಚಣಿ ಯೋಜನೆಯ ಅಗತ್ಯ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.

Facebook Comments