ಯುವಕನ ಕತ್ತು ಕೊಯ್ದು ಭೀಕರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Murder--01

ನಂಜನಗೂಡು,ಫೆ.11- ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಪೊದೆಯಲ್ಲಿ ಬಿಸಾಡಿ ಹೋಗಿರುವ ಘಟನೆ ಸಮೀಪದ ಸರಗೂರು ತಾಲೂಕಿನ ಮುಳ್ಳೂರು ಹುಂಡಿಯಲ್ಲಿ ನಡೆದಿದೆ.

ಗ್ರಾಮದ ರಸ್ತೆ ಸಮೀಪದ ಪೊದೆಯಲ್ಲಿ ಯುವಕನ ಶವ ಪತ್ತೆಯಾಗಿದೆ.ಕೊಲೆಯಾದ ಯುವಕ ಸುಮಾರು ಇಪ್ಪತ್ತು ವರ್ಷದವನಂತೆ ಕಾಣುತ್ತಿದ್ದು, ಈತನ ಹೆಸರು , ವಿಳಾಸ ತಿಳಿದುಬಂದಿಲ್ಲ.

ರಸ್ತೆಯ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಇಂದು ಮುಂಜಾನೆ ಶಾಲಾ ವಿದ್ಯಾರ್ಥಿಗಳು ಪೊದೆ ಬಳಿ ಯುವಕ ಕೊಲೆಯಾಗಿರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಇತ್ತ ಯುವಕನ ಮೃತದೇಹದ ಪಕ್ಕದಲ್ಲಿ ನಿರಂತರವಾಗಿ ಆತನ ಮೊಬೈಲ್ ರಿಂಗ್ ಆಗುತ್ತಿದ್ದು, ಶವದ ಬಳಿ ವೇಲ್ ಕೂಡ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಮೃತದೇಹದ ಬಳಿ ಹತ್ಯೆಗೆ ಬಳಸಿರುವ ಚಾಕು ಮತ್ತು ಸೀಮೆಎಣ್ಣೆ ಕ್ಯಾನ್ ಕೂಡ ಕಂಡುಬಂದಿದೆ. ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಯುವಕನನ್ನು ರಾತ್ರಿ ಕೊಲೆ ಮಾಡಿ ಶವ ತಂದು ಬಿಸಾಡಿ ರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಯುವಕ ಯಾರು, ಏತಕ್ಕಾಗಿ ಈತನನ್ನು ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಸ್ಥಳಕ್ಕಾಗಮಿಸಿದ ಸರಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಮೃತ ಯುವಕನ ವಾರಸುದಾರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Facebook Comments