ಟ್ರ್ಯಾಕ್ಟರ್ ಪಲ್ಟಿ: ಓರ್ವ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು, ಫೆ.12- ಕೆರೆಯಲ್ಲಿ ಮರಳು ತುಂಬುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಹೊನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಂತರಾಜು(55) ಮೃತ ದುರ್ದೈವಿ. ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರ್ವಗೊಂಡನಹಳ್ಳಿ ಕೆರೆಯಲ್ಲಿ ರಾತ್ರಿ ಸುಮಾರು 11ಗಂಟೆ ಸಮಯದಲ್ಲಿ ಮರಳು ತುಂಬುವಾಗ ಈ ಘಟನೆ ಜರುಗಿದೆ.  ರಘು ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್‍ನಲ್ಲಿ ಕಾಂತರಾಜು ಕೂಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ . ಹೊನವಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments