5 ಕೋಟಿ ಮನೆಗಳ ಮೇಲೆ ರಾರಾಜಿಸುತ್ತಿವೆ ಬಿಜೆಪಿ ಧ್ವಜಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.12-ಮುಂಬರುವ ಲೋಕಸಭಾ ಚುನಾವಣೆಗಾಗಿ ಸಮರೋಪಾದಿಯಲ್ಲಿ ಸಜ್ಜಾಗಿರುವ ಬಿಜೆಪಿ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಇಂದು ದೇಶದ 5ಕೋಟಿ ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ರಾರಾಜಿಸುವ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡಿದೆ.

ಗುಜರಾತನಲ್ಲಿ ಇಂದು ತಮ್ಮ ಮನೆ ಮೇಲೆ ಬಿಜೆಪಿ ಕೇಸರಿಯ ಧ್ವಜವನ್ನು ಹಾರಿಸುವ ಮೂಲಕ ಮೇರಾ ಪರಿವಾರ್-ಭಾಜಪ ಪರಿವಾರ್ ಅಭಿಯಾನಕ್ಕೆ ಚಾಲನೆ ನೀಡಿದರು.

ಇಂದಿನಿಂದ ಆರಂಭವಾಗಿರುವ ಈ ಧ್ವಜ ಅಭಿಯಾನ ಮಾರ್ಚ್ 2ರವರೆಗೆ ಮುಂದೂವರಿಯಲಿದ್ದು. ದೇಶದ ವಿವಿಧ ರಾಜ್ಯಗಳಲ್ಲಿನ 5ಕೋಟಿ ಮನೆಗಳ ಮೇಲೆ ಕೇಸರಿ ಧ್ವಜ ರಾರಾಜಿಸಲಿದೆ.

ನನ್ನ ಕುಟುಂಬ-ಬಿಜೆಪಿ ಕುಟುಂಬ ಅಭಿಯಾನವು ಇಂದಿನಿಂದ ದೇಶಾದ್ಯಂತ ಆರಂಭಗೊಂಡಿದ್ದು ಲೋಕಸಭಾ ಸಮರಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.
ಫೆ. 28ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹಾಸಂವಾದ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದಾರೆ.

9ಲಕ್ಷ ಮತಗಟ್ಟೆ ಕೇಂ್ರದಗಳ ಕಾರ್ಯಕರ್ತರ ಜೊತೆ ಮೋದಿ ಮಾತುಕತೆ ನಡೆಸಲಿದ್ದು. ಇದು ದೇಶ ಅತೀ ದೊಡ್ಡ ಆ್ಯಪ್ ಸಂವಾದ ಎಂಬ ದಾಖಲೆ ನಿರ್ಮಿಸಲಿದೆ.

Facebook Comments