ಸುನಂದಾ ಪುಷ್ಕರ್ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್‌ಐಆರ್..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ. 13: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಎಡಿಟರ್ ಇನ್ ಛೀಫ್ ಅರ್ನಬ್ ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ಹಾಕುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ಹೌಸ್ ಕೋರ್ಟ್ ಸೂಚನೆ ನೀಡಿದೆ.

2017ರ ಮೇ 8 ರಿಂದ 13ರವರೆಗೆ ರಿಪಬ್ಲಿಕ್‌ ಚಾನೆಲ್‌ನಲ್ಲಿ ಸುನಂದಾ ಪುಷ್ಕರ್ ಸಾವಿನ ಕುರಿತಾದ ವರದಿ ಬಿತ್ತರಿಸಲಾಗಿತ್ತು. ಈ ವೇಳೆ ತಮ್ಮ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ತರೂರ್, ಅರ್ನಬ್ ಗೋಸ್ವಾಮಿ, ರಿಪಬ್ಲಿಕ್‌ ನ್ಯೂಸ್‌ ಚಾನೆಲ್‌ ವಿರುದ್ಧ ದೆಹಲಿ ಹೈಕೋರ್ಟ್‌ ನಲ್ಲಿ ಸಿವಿಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು ಅಲ್ಲದೇ, ತಮ್ಮ ಘನತೆಗೆ ಧಕ್ಕೆ ತಂದ ಕಾರಣ 2 ಕೋಟಿ ರು. ನಷ್ಟ ಪರಿಹಾರ ತುಂಬಬೇಕೆಂದು ಶಶಿ ತರೂರ್‌ ಒತ್ತಾಯಿಸಿದ್ದಾರೆ.

‘ನನ್ನ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿರುವ ವೇಳೆಯಲ್ಲೇ ಕೆಲವು ಗೌಪ್ಯ ಮಾಹಿತಿ, ದಾಖಲೆಗಳನ್ನು ಅಕ್ರಮವಾಗಿ ಅರ್ನಬ್ ಅವರು ಸಂಗ್ರಹಿಸಿದ್ದರು.

ಪೊಲೀಸರ ಅಂತರಿಕ ದಾಖಲೆ ಸಂಗ್ರಹ ಗೌಪ್ಯತೆಗೆ ಇದು ಧಕ್ಕೆ ತಂದಿದೆ. ತನಿಖೆ ಜಾರಿಯಲ್ಲಿರುವಾಗಲೇ ಈ ದಾಖಲೆಗಳನ್ನು ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದಿಡುವುದು ಅಪರಾಧವೆನಿಸುತ್ತದೆ’ ಎಂದು ತಮ್ಮ ದೂರಿನಲ್ಲಿ ಸಂಸದ ಶಶಿ ತರೂರ್ ಹೇಳಿದ್ದಾರೆ.

ಗೋಸ್ವಾಮಿ ಅವರ ಟಿವಿ ವಾಹಿನಿಯು ಉದ್ದೇಶ ಪೂರ್ವಕವಾಗಿ, ಪೂರ್ವಗ್ರಹ ಪೀಡಿತವಾಗಿ ನನ್ನ ಮೇಲೆ ದೋಷಾರೋಪಣೆ ಮಾಡಿದ್ದು, ನನ್ನ ತೇಜೋವಧೆಗೆ ಮುಂದಾಗಿದೆ. ಇದು ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡಿದ ಗಿಮಿಕ್ ಅಷ್ಟೇ ಎಂದು ತರೂರ್ ಹೇಳಿದ್ದಾರೆ.

Facebook Comments

Sri Raghav

Admin