ಕೇಂದ್ರ ಸಂಗ್ರಹಣಾ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಕೇಂದ್ರ ಸಂಗ್ರಹಣಾ ನಿಗಮ ದಲ್ಲಿ ಖಾಲಿ ಇರುವ 571 ಜೂನಿಯರ್ ಅಧೀಕ್ಷಕ ಮತ್ತು ವಿವಿಧ ಹುದ್ದೆಯ ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 2019 ರ ಫೆಬ್ರವರಿ 15 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 2019 ರ ಮಾರ್ಚ್ 16 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಜೂನಿಯರ್ ಅಧೀಕ್ಷಕ ಮತ್ತು ವಿವಿಧ ಹುದ್ದೆಯ ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಕೃಷಿ ಕ್ಷೇತ್ರದಲ್ಲಿ ಪದವಿ ಅಥವಾ ಪ್ರಾಣಿಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಜೈವಿಕ-ರಸಾಯನಶಾಸ್ತ್ರ ಪದವಿವಿದ್ಯಾರ್ಹತೆ ಹೊಂದಿರಬೇಕು.

2019 ರ ಮಾರ್ಚ್ 16 ರಂತೆ 28 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಪಿಡಬ್ಲ್ಯೂಡಿ ಅರ್ಜಿದಾರರಿಗೆ ಶುಲ್ಕ 300/-. ಇತರೆ ಅಭ್ಯರ್ಥಿಗಳಿಗೆ ರೂ. 1000 / – ನಿಗದಿಪಡಿಸಲಾಗಿದೆ.

ಆಯ್ಕೆ ಆನ್ಲೈನ್ ಪರೀಕ್ಷೆಯ ಆಧರಾದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ  ಈ ಮುಂದಿನ ಲಿಂಕ್  ಗೆ ಭೇಟಿನೀಡಿ :   https://bit.ly/2SK1eTH

 

Facebook Comments