ಶಾಕಿಂಗ್ : ಮೋದಿ ಎದುರೇ ಸಚಿವೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಮಂತ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲಾ, ಫೆ.12- ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿಪ್ಲಬ್ ದೇಬ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲೊ ತ್ರಿಪುರಾ ಸಚಿವರೊಬ್ಬರು ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾರೆ.

ತ್ರಿಪುರಾ ಸಚಿವ ಮನೋಜ್ ಕುಮಾರ್ ಕಾಂತಿ ದೇಬ್ ಇಂತಹ ಕೃತ್ಯವೆಸಗಿ ಈಗ ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ಇದು ಮಾಧ್ಯಮಗಳಲ್ಲಿ ಭಾರೀ ದೊಡ್ಡ ಮಟ್ಟದಲ್ಲೊ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿರುವ ಮಹಿಳೆ ಕೂಡ ತ್ರಿಪುರಾದ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಸಚಿವರಾಗಿದ್ದು, ಸಾರ್ವಜನಿಕವಾಗಿ ಇಂತಹ ಮುಜುಗರ ಎದುರಿಸಿದ್ದಾರೆ.

ವಿಪಕ್ಷಗಳು ಮನೋಜ್ ಕುಮಾರ್ ಕಾಂತಿ ಅವರ ರಾಜೀನಾಮೆಗೆ ಅಗ್ರಹಿಸಿದ್ದಾರೆ. ಈ ಕೂಡಲೇ ಸಿಎಂ ಬಿಪ್ಲಬ್ ದೇಬ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಸಚಿವ ಮನೋಜ್ ದೇಬ್, ಇದು ತಮ್ಮ ವಿರುದ್ಧ ಹೆಣೆದಿರುವ ಷಡ್ಯಂತ್ರ, ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

Facebook Comments