ಸಂಸತ್ ಸಭಾಂಗಣದಲ್ಲಿ ಅಟಲ್ ಭಾವಚಿತ್ರ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.12-ಭಾರತದ ಶಕ್ತಿ ಕೇಂದ್ರ ಪಾರ್ಲಿಮೆಂಟ್‍ನ ಸಂಸತ್ ಭವನದ ಸಭಾಂಗಣದಲ್ಲಿ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇಂದು ಅನಾವರಣಗೊಂಡಿದೆ.

ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೈಲವರ್ಣದ ಚಿತ್ರಪಟವನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಟಲ್ ಅವರ ಗುಣಗಾನ ಮಾಡಿದರು. ಅವರ ತತ್ವ-ಸಿದ್ದಾಂತ ಮತ್ತು ಆದರ್ಶಗಳು ಎಂದಿಗೂ ಆದರ್ಶಪ್ರಾಯ,

ಅವರು ತಮ್ಮ ರಾಜಕೀಯ ಜೀವನದ ಸುದೀರ್ಘ ಪಯಣದಲ್ಲಿ ವಿವಿಧ ಹುದ್ದೆಗಳನ್ನೂ ಅವರ ಜನಪರ ಧ್ವನಿ ಸದಾ ಅನುಕರಣೀಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

Facebook Comments