ಪ್ರಧಾನಿ ಮೋದಿಗೆ ಜನರಿಂದ ಬಂಡೆಯಂಥ ಬೆಂಬಲ : ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಫೆ.12-ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಬಂಡೆ ಸದೃಢತೆಯಂಥ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ಧಾರೆ.

ಮೇರಾ ಪರಿವಾರ್-ಭಾಜಪ ಪರಿವಾರ್ ಹೆಸರಿನ ಮತದಾರರನ್ನು ತಲುಪುವ ಅಭಿಯಾನವನ್ನು ಗುಜರಾತ್‍ನಿಂದ ಆರಂಭಿಸಿದ ಅವರು, ವಿಶ್ವದಲ್ಲಿ ಭಾರತವು ಸೂಪರ್‍ಪವರ್ ಆಗಲು ಮುಂಬರುವ ಸಾರ್ವತ್ರಿಕ ಚುನಾವಣೆ ಬಹು ಮುಖ್ಯ ಹೆಜ್ಜೆಯಾಗಿದೆ ಎಂದರು.

ನಾವು ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಜನರು ಬಂಡೆಯಂತೆ ಪ್ರಧಾನಿ ಮೋದಿಗೆ ಬೆಂಬಲವಾಗಿ ನಿಂತಿರುವುದನ್ನು ನಾನು ನೋಡಿದ್ದೇನೆ. ಅವರ ಕಣ್ಣುಗಳಲ್ಲಿ ಬೆಂಬಲದ ಮನೋಭಾವವನ್ನು ಕಾಣಬಹುದು ಎಂದು ಅಮಿತ್ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

ವಿರೋಧ ಪಕ್ಷಗಳ ಮಹಾಮೈತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಇದು ರಾಜ್ಯ ಮಟ್ಟದ ನಾಯಕರಿಂದ ಮಾತ್ರ ಸೃಷ್ಟಿಯಾಗಿರುವ ಮೈತ್ರಿಯಾಗಿದೆ. ಇದು ಭಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ನುಡಿದರು.

Facebook Comments