ಇಂದಿನ ಪಂಚಾಗ ಮತ್ತು ರಾಶಿಫಲ (12-02-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಾಸ್ತ್ರಗಳ ಅರ್ಥವನ್ನು ತಿಳಿದು ವಿಚಾರ ಮಾಡಬೇಕೆಂಬ ಆಸೆಯಿಲ್ಲ. ನವರಸ ಗಳಿಂದ ತುಂಬಿದ ಕಾವ್ಯವನ್ನು ಓದಿ ಆನಂದಿಸಬೇಕೆಂಬ ಕುತೂಹಲವಿಲ್ಲ. ಎಲ್ಲ ಬಗೆಯ ಸಂದೇಹ ಗಳೂ ದೂರವಾಗಿವೆ. ಈಗ ನಾನು ಶಿವನಲ್ಲಿ ಶರಣುಹೋಗಲು ಇಷ್ಟಪಡುತ್ತೇನೆ.  -ವೈರಾಗ್ಯಶತಕ

 

# ಪಂಚಾಂಗ : ಮಂಗಳವಾರ, 12.02.2019
ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ ಸಂ.06.24
ಚಂದ್ರ ಉದಯ ಬೆ.11.38/ ಚಂದ್ರ ಅಸ್ತ ಸಂ.12.25
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಸಪ್ತಮಿ (ಮ.03.55)
ನಕ್ಷತ್ರ: ಭರಣಿ (ರಾ.10.11) / ಯೋಗ: ಶುಕ್ಲ (ಬೆ.11.28)
ಕರಣ: ವಣಿಜ್-ಭದ್ರೆ (ಮ.03.55-ರಾ.03.56)
ಮಳೆ ನಕ್ಷತ್ರ: ಧನಿಷ್ಠ / ಮಾಸ: ಮಕರ / ತೇದಿ: 30

# ರಾಶಿ ಭವಿಷ್ಯ

ಮೇಷ: ಸೋದರ-ಸೋದರಿಯರಿಂದ ಕಷ್ಟಗಳಿರುವವು
ವೃಷಭ: ಸರ್ಕಾರದಿಂದ ಧನ ಸಹಾಯ ಬರುವುದು
ಮಿಥುನ: ಕುಟುಂಬ ಸೌಖ್ಯ ಕಡಿಮೆಯಾಗುವುದು
ಕಟಕ: ಸ್ಥಿತಿವಂತರಾಗಿದ್ದರೂ ಕಷ್ಟಗಳು ತಪ್ಪಿದ್ದಲ್ಲ
ಸಿಂಹ: ವಿಶೇಷ ಪ್ರಯಾಣ ಒದಗಿ ಬರುವ ಸಾಧ್ಯತೆಗಳಿವೆ
ಕನ್ಯಾ: ಹಣದ ಕೊರತೆ ಇಲ್ಲವಾದರೂ ಕುಟುಂಬದಲ್ಲಿ ಕಲಹಗಳು ಉಂಟಾಗಲಿವೆ
ತುಲಾ: ನಿರ್ಭಯವಾಗಿ ಎಲ್ಲ ಕೆಲಸ-ಕಾರ್ಯಗಳನ್ನೂ ನಿಭಾಯಿಸುವಿರಿ
ವೃಶ್ಚಿಕ: ಬಂಧು-ಮಿತ್ರರು ನಿಮಗೆ ತೊಂದರೆ ಕೊಡುವರು
ಧನುಸ್ಸು: ಶಾರೀರಿಕ ತೊಂದರೆ ಇರುವುದು
ಮಕರ: ಶುಭ ಕಾರ್ಯಗಳನ್ನು ಮಾಡಲು ಪ್ರಯತ್ನ ಗಳು ನಡೆಯುತ್ತವೆ. ಹಿರಿಯರಲ್ಲಿ ಭಕ್ತಿ ಇರುವುದು
ಕುಂಭ: ನಿಮ್ಮ ಹಣವನ್ನು ಚೋರರು ಅಪಹರಿಸುವರು
ಮೀನ: ನಿಮಗೆ ಅಪ್ರಿಯವಾದ ಕೆಲಸಗಳನ್ನು ಮಾಡುವ ಸಂದರ್ಭಗಳು ಎದುರಾಗಲಿವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments