ಬಂಗಾಳಕೊಲ್ಲಿಯಲ್ಲಿ ಭೂಕಂಪ, ಚೆನ್ನೈನಲ್ಲೂ ಕಂಪಿಸಿದ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಫೆ.12- ಬಂಗಾಳಕೊಲ್ಲಿಯಲ್ಲಿ ಇಂದು ನಸುಕಿನಲ್ಲಿ ಲಘು ಭೂಕಂಪನ ಸಂಭಸಿದ್ದು, ಸಮೀಪದ ಚೆನ್ನೈ ಮಹಾ ನಗರಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಚೆನ್ನೈ ಕಡಲತೀರದಿಂದ ಸುಮಾರು 609 ಕಿಮೀ ದೂರದಲ್ಲಿ 10 ಕಿಮೀ ಸಮುದ್ರದಾಳದಲ್ಲಿ ಇಂದು ಮುಂಜಾನೆ 1.30ರಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನ 4.9ರಷ್ಟು ತೀವ್ರತೆ ದಾಖಲಾಗಿದೆ.  ಭೂಕಂಪನದ ಅನುಭವಾಗುತ್ತಿದ್ದಂತೆಯೇ ಚೆನ್ನೈ ಜನರು ಭಯದಿಂದಲೇ ರಾತ್ರಿ ಕಳೆದರು. ತಮಗಾದ ಕೆಲವು ಅನುಭವವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Facebook Comments