ವೀರಮರಣವನ್ನಪ್ಪಿದ ಯೋಧರಿಗೆ ಬಿಸಿಸಿಐ, ಬಾಲಿವುಡ್ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ .15- ಪಾಕಿಸ್ತಾನದ ಪೈಶಾಚಿಕ ಕೃತ್ಯದಿಂದಾಗಿ ಕಾಶ್ಮೀರದ ಪುಲ್ವಾಮಾದ ಆವಂತಿಪುರದಲ್ಲಿ ವೀರಮರಣವನ್ನಪ್ಪಿರುವ ಸೈನಿಕರಿಗೆ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ, ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಗೌರವ ಸೂಚಿಸಿದ್ದಾರೆ.

ಕಣಿವೆ ರಾಜ್ಯದ ಪುಲ್ವಾಮಾ ಬಳಿ ಸೈನಿಕರ ಮೇಲೆ ಕಿಡಿಗೇಡಿ ಪಾಕಿಸ್ತಾನವು ಆತ್ಮಾಹುತಿ ದಾಳಿ ಮಾಡಿರುವ ವಿಷಯ ಕೇಳಿ ಆಘಾತಗೊಂಡೆನು. ಈ ಘಟನೆಯಲ್ಲಿ ಸಾವನ್ನಪ್ಪಿದ ವೀರಯೋಧರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ, ಗಾಯಗೊಂಡಿರುವ ಯೋಧರು ಶೀಘ್ರ ಗುಣಮುಖರಾಗಲಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಟ್ವಿಟ್ಟರ್ ಮೂಲಕ ಸದಾ ಸುದ್ದಿಯಲ್ಲಿರುವ ಭಾರತದ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಜಮ್ಮು ಮತ್ತು ಕಾಶ್ಮೀರ ಬಳಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆದು ಯೋಧರು ಹುತಾತ್ಮರಾಗಿರುವುದರಿಂದ ಇಡೀ ದೇಶವೇ ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ ಎಂದರು.

ಟೀಂ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ, ಶಿಖರ್‍ಧವನ್, ಸುರೇಶ್‍ರೈನಾ, ಮೊಹಮ್ಮದ್‍ಕೈಫ್, ವಿವಿಎಸ್ ಲಕ್ಷ್ಮಣ್ ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ವೀರಮರಣವನ್ನಪ್ಪಿದ ಯೋಧರಿಗೆ ನಮನವನ್ನು ಸಲ್ಲಿಸಿದ್ದಾರೆ.

ಕಂಬನಿ ಮಿಡಿದ ಬಾಲಿವುಡ್:  ಕಾಶ್ಮೀರದ ಆವಂತಿಪುರದಲ್ಲಿ ನಿನ್ನೆ ಉಗ್ರರು ನಡೆಸಿದ ದಾಳಿಯ ಸುದ್ದಿಯನ್ನು ಓದಲು ಕೂಡ ನನ್ನ ಮನಸ್ಸಿಗೆ ಘಾಸಿಯಾಗುತ್ತಿದೆ, ಇಂತಹ ಘೋರ ಕೃತ್ಯಗಳು ಇಂದು ಮುಂದೆ ಸಂಭವಿಸದಿರಲಿ, ವೀರಮರಣನ್ನಪ್ಪಿರುವ ಸೈನಿಕರ ಕುಟುಂಬಗಳಿಗೆ ದುಃಖವನ್ನು ಭರಿಸುವ ಆ ಭಗಂವತನು ನೀಡಲಿ, ಗಾಯಗೊಂಡಿರುವ ಯೋಧರು ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್‍ನ ಖ್ಯಾತ ನಟ ಅಮೀರ್‍ಖಾನ್ ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಅಮೀರ್‍ಖಾನ್‍ರಂತೆ ಬಾಲಿವುಡ್‍ನ ತಾರೆಗಳಾದ ರಣವೀರ್‍ಸಿಂಗ್, ಅಲಿಯಾಭಟ್, ಅನುಷ್ಕಾಶರ್ಮಾ, ಟೈಗರ್ ಶ್ರಾಫ್, ಫರ್ಹಾನ್ ಅಖ್ತರ್, ಶಾಹಿದ್ ಕಪೂರ್ ಕೂಡ ತಮ್ಮ ಟ್ವಿಟ್ಟರ್‍ಗಳ ಮೂಲಕ ವೀರ ಸೈನಿಕರಿಗೆ ತಮ್ಮ ನಮನ ಸಲ್ಲಿಸಿದ್ದಾರೆ.

Facebook Comments