ಕೇಶರಾಶಿಯಿಂದ ತಿಳಿಯುತ್ತೆ ಮಹಿಳೆಯರ ಸ್ವಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

ಸುಂದರವಾದ ದಟ್ಟ ಕೂದಲನ್ನು ಯಾರು ತಾನೆ ಇಷ್ಟಪಡುವುದಿಲ್ಲ. ಸೌಂದರ್ಯದ ಸಂಕೇತವಾಗಿರುವ ಕೂದಲು ವ್ಯಕ್ತಿತ್ವನ್ನು ಗುರುತಿಸುಲ್ಲಿಯು ಪ್ರಧಾನ ಪಾತ್ರವಹಿಸುತ್ತದೆ. ಕೆಲವರ ಅಂದವನ್ನು ಉದ್ದ ಕೂದಲು ಹೆಚ್ಚಿಸಿದರೆ ಮತ್ತೆ ಕೆಲವರಿಗೆ ಗಿಡ್ಡ ಕೂದಲೇ ಆಕರ್ಷಕವಾಗಿರುತ್ತದೆ. ಅದರಲ್ಲೂ ಗುಂಗುರು ಕೇಶರಾಶಿಯ ಹೊಂದಿರುವವರನ್ನು ನೋಡುವುದೇ ಚೆಂದ.

ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಕೇಶ ವಿನ್ಯಾಸಗಳು ಟ್ರೆಂಡ್ ಆಗುತ್ತಿದೆ. ಆದರೆ ಸಮುದ್ರಶಾಸ್ತ್ರದ ಪ್ರಕಾರ ಮೂಲ ಕೂದಲ ರಚನೆ ಮತ್ತು ಬಣ್ಣದಿಂದ ಮಹಿಳೆಯ ಸ್ವಭಾವವನ್ನು ಗುರುತಿಸಿಕೊಳ್ಳಬಹುದಂತೆ.

ಈ ಶಾಸ್ತ್ರದ ಪ್ರಕಾರ ಯಾರು ಗುಂಗುರು ಕೂದಲು ಹೊಂದಿರುವ ಮಹಿಳೆಯರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಸದಾ ಅದೃಷ್ಟ ಜೊತೆಗಿರುವುದರಿಂದ ಇವರು ಹೆಚ್ಚು ಸಂತೋಷ ಮತ್ತು ಆನಂದದಿಂದ ಇರುತ್ತಾರೆ. ಕ್ರಿಯಾಶೀಲರಾಗಿರುವ ಇವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೂ ಹೆಚ್ಚಿನ ಅದೃಷ್ಟ ಖುಲಾಯಿಸುತ್ತದೆ.

ಉದ್ದ ಕೂದಲು ಹೊಂದಿರುವವರು ಆಕರ್ಷಕವಾಗಿರುತ್ತಾರೆ. ಹೆಚ್ಚಿನ ಪುರುಷರಿಗೆ ತಮ್ಮ ಸಂಗಾತಿ ಉದ್ದ ಕೂದಲನ್ನು ಹೊಂದಿರಬೇಕೆಂದು ಬಯಸುತ್ತಾರೆ. ಇಂತಹ ಕೂದಲಿನ ಒಡೆತಿಯರು ಉತ್ತಮ ದೃಷ್ಟಿಕೋನಗಳನ್ನು ಹೊಂದಿರುವವರು ಆಗಿರುತ್ತಾರೆ. ಇವರು ಕನಸಿನ ಲೋಕಕ್ಕಿಂತ ವಾಸ್ತವವನ್ನು ಅಂಗೀಕರಿಸಿ ಹೊಂದಿಕೊಂಡು ಬದುಕಲು ಇಚ್ಛಿಸುತ್ತಾರೆ.

ನೇರ ಕೂದಲಿನ (ಸ್ಟ್ರೈಟ್ ಹೇರ್) ಮಹಿಳೆಯರಲ್ಲಿ ಯಾವುದೇ ಕಾರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯವಿರುತ್ತದೆ. ಖರ್ಚು ವೆಚ್ಚವನ್ನು ಸಂಭಾಳಿಸುವುದರಲ್ಲೂ ಇವರು ಒಂದು ಹೆಜ್ಜೆ ಮುಂದೆ ಎನ್ನಬಹುದು.

ಗಿಡ್ಡ ಅಥವಾ ಚಿಕ್ಕ ಕೂದಲನ್ನು ಹೊಂದಿರುವವರು ಹೆಚ್ಚು ಶಿಸ್ತು ಪ್ರಿಯರಾಗಿರುತ್ತಾರೆ. ಪ್ರತಿಯೊಂದು ಕೆಲಸಗಳನ್ನು ಶ್ರಮವಹಿಸಿ ಮಾಡುವ ಇವರಲ್ಲಿ ಜನರ ಬಗ್ಗೆ ಗೊಂದಲದ ಅಭಿಪ್ರಾಯಗಳಿರುತ್ತದೆ.

ಸಣ್ಣ ಕೂದಲಿನ ಮಹಿಳೆಯರು ಕೆರಿಯರ್ ಬಗ್ಗೆ ಸದಾ ಜಾಗೃತರಾಗಿರುತ್ತಾರೆ. ಹಾಗೆಯೇ ಇವರು ಹೆಚ್ಚು ಭಾಗ್ಯಶಾಲಿಗಳಾಗಿರುತ್ತಾರೆ. ಅಲ್ಲದೆ ಇವರನ್ನು ಅರ್ಥಮಾಡಿಕೊಳ್ಳಲು ತುಸು ಕಷ್ಟ ಎನ್ನಲಾಗಿದೆ.

ಕಡಿಮೆ ಕೂದಲು ಮತ್ತು ತೆಳುವಾದ ಕೇಶವನ್ನು ಹೊಂದಿರುವ ಮಹಿಳೆಯರಲ್ಲಿ ಆತ್ಮ ವಿಶ್ವಾಸದ ಕೊರೆತೆ ಇರುತ್ತದೆ. ಇವರು ಸದಾ ಶಾಂತಿಯನ್ನು ಬಯಸುತ್ತಾರೆ. ಜೀವನದ ಬಗ್ಗೆ ಯಾವುದೇ ರೀತಿಯ ನಿರೀಕ್ಷೆಗಳನ್ನು ಇವರು ಇಟ್ಟುಕೊಳ್ಳುವುದಿಲ್ಲ.

Facebook Comments