ಕಾರಿನ ಗಾಜು ಒಡೆದು 2 ಲಕ್ಷ ರೂ. ಹಣ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.16-ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದ ಚೋರರು 2 ಲಕ್ಷ ಹಣವಿದ್ದ ಬ್ಯಾಗನ್ನು ದೋಚಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಿ.ಎಂ.ಎಲ್.ಗೌಡ ಎಂಬುವರು ಕುರುಬರಹಳ್ಳಿಯಲ್ಲಿನ ಕೆನರಾ ಬ್ಯಾಂಕ್‍ಗೆ ಹಣ ಕಟ್ಟುವ ಸಲುವಾಗಿ 2 ಲಕ್ಷ ಹಣವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಜಾಲಹಳ್ಳಿ ಕ್ರಾಸ್‍ನಿಂದ ಕುರುಬರಹಳ್ಳಿ ಕಡೆಗೆ ನಿನ್ನೆ ಬರುತ್ತಿದ್ದರು.

ಮಧ್ಯಾಹ್ನ 12.30ರ ಸಮಯದಲ್ಲಿ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಗೆಳೆಯರ ಬಳಗದ 2ನೇ ಹಂತದಲ್ಲಿರುವ ಅನುಗ್ರಹ ಪ್ಲಾಜಾ ಬಳಿ ಕಾರನ್ನು ಪಾರ್ಕಿಂಗ್ ಮಾಡಿ ಅಂಗಡಿಗೆ ತೆರಳಿದ್ದಾರೆ.

ಈ ಸಮಯವನ್ನೇ ಕಾದಿದ್ದ ಚೋರರು ಕಾರಿನ ಗಾಜು ಒಡೆದು 2 ಲಕ್ಷ ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಗೌಡ ಅವರು 10 ನಿಮಿಷದಲ್ಲೇ ವಾಪಸ್ ಕಾರಿನ ಬಳಿ ಬರುವಷ್ಟರಲ್ಲಿ ಈ ಕಳ್ಳತನ ನಡೆದಿದೆ.

ತಕ್ಷಣ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಪಾರ್ಕಿಂಗ್ ಮಾಡಿದ್ದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿ ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments