ಅಮೇರಿಕಾದಲ್ಲಿ ಗನ್‍ ಮ್ಯಾನ್ ಅಟ್ಟಹಾಸಕ್ಕೆ ಐವರ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕಾಗೋ, ಫೆ.16 (ಪಿಟಿಐ)- ಅಮೆರಿಕದ ಚಿಕಾಗೋ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶವೊಂದರಲ್ಲಿ ಬಂದೂಕುದಾರಿಯೊಬ್ಬ ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟು, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಈ ದಾಳಿಯ ನಂತರ ನಡೆದ ಗುಂಡಿನ ಕಾಳಗದಲ್ಲಿ ಹಂತಕನನ್ನು ಪೊಲೀಸರು ಕೊಂದಿದ್ದಾರೆ. ಗ್ಯಾರಿ ಮಾರ್ಟಿನ್(45) ಮೃತ ಗನ್‍ಮ್ಯಾನ್, ಈತ ಈ ಕೈಗಾರಿಕಾ ಪ್ರದೇಶದ ಓರ್ವ ಉದ್ಯೋಗಿ.

ಚಿಕಾಗೋದಿಂದ 65 ಕಿ.ಮೀ.ದೂರದಲ್ಲಿರುವ ಇಲಿನೊಯ್ನಸ್‍ನ ಆರೊರಾ ಪಟ್ಟಣದ ಕಾರ್ಖಾನೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.  ಈ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ನೌಕರಿ ಕಳೆದುಕೊಂಡ ಗ್ಯಾರಿ ಹತಾಶೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಗನ್‍ಮ್ಯಾನ್ ದಾಳಿಯಲ್ಲಿ ಐವರು ಮೃತಪಟ್ಟು, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ತೀವ್ರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹೆಲಿಕಾಪ್ಟರ್ ಮೂಲಕ ಚಿಕಾಗೋಗೆ ರವಾನಿಸಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.

Facebook Comments

Sri Raghav

Admin