ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ‘ಯಜಮಾನ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.16- ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ. ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಹಾಗೂ ಯೋಧರ ಮೇಲಿನ ದಾಳಿ ಹಿನ್ನಲೆಯಲ್ಲಿ ದರ್ಶನ್ ಈ ಭಾರೀ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.ಇಂದು ಬೆಳಿಗ್ಗೆ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು.

ರಾತ್ರಿಯಿಂದಲೇ ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸಿ ದರ್ಶನ್‍ಗೆ ಹುಟ್ಟಹಬ್ಬದ ಶುಭಾಷಯ ಕೋರಿದ್ದಾರೆ. ಕಳೆದ ವರ್ಷ ರಾಶಿರಾಶಿ ಹಾರ,ಕೇಕ್‍ಗಳನ್ನು ತಂದು ಸಂಭ್ರಮಿಸಿದ್ದ ಅಭಿಮಾನಿಗಳಿಗೆ ಈ ಹಿಂದೆಯೇ ದರ್ಶನ ಈ ರೀತಿ ಕೇಕ್, ಹಾರ, ತುರಾಯಿಗಳಿಗೆ ಹಣ ವ್ಯಯಿಸದಂತೆ ಮನವಿ ಮಾಡಿದ್ದರು.

ಹಾಗಾಗಿ ಅಭಿಮಾನಿಗಳು ದವಸ, ಧಾನ್ಯ ಸೇರಿದಂತೆ ದರ್ಶನ್ ಇಷ್ಟಪಡುವ ಪ್ರಾಣಿ- ಪಕ್ಷಿಗಳನ್ನು ತಂದುಕೊಟ್ಟು ಅಭಿಮಾನ ಮೆರೆದಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಗೊಂಡಿರುವ ದವಸ, ಧಾನ್ಯಗಳನ್ನು ಅನಾಥಶ್ರಮ, ನಿರ್ಗತಿಕರಿಗೆ ಹಂಚಲು ಅನುವಾಗುವಂತೆ ಒಂದು ತಂಡ ರಚಿಸುವ ವ್ಯವಸ್ಥೆಯನ್ನು ದರ್ಶನ್ ಕೈಗೊಂಡಿದ್ದಾರೆ.

ಪ್ರಾಣಿ ಪ್ರಿಯರಾಗಿರುವ ದರ್ಶನಗೆ ಅಭಿಮಾನದಿಂದ ನೀಡಿರುವ ಪ್ರಾಣಿ-ಪಕ್ಷಿಗಳನ್ನು ತಮ್ಮ ಫಾರ್ಮ್‍ಹೌಸ್‍ನಲ್ಲಿ ಇಟ್ಟು ಪೋಷಿಸಲು ಮುಂದಾಗಿದ್ದಾರೆ. ಕೈ ನೋವಿನಿಂದ ಬಳಲುತ್ತಿದ್ದರು ಅಭಿಮಾನದಿಂದ ಬಂದು ಹುಟ್ಟುಹಬ್ಬದ ಶುಭಾಷಯ ಕೋರಿದ ನೂರಾರು ಮಂದಿ ಅಭಿಮಾನಿಗಳಿಗೆ ಕೈ ಕುಲುಕಿ ಅಭಿನಂದಿಸಿದ್ದಾರೆ.

ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದರ್ಶನ್ ಮುಂದೆ ದಾಸ, ಬುಲ್‍ಬುಲ್, ಸಾರಥಿ, ಚಿಂಗಾರಿ, ಐರಾವತ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಸಾಮಾಜಿಕ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಮಿಂಚಿ ದವರು. ನಮ್ಮ ಪ್ರೀತಿಯ ರಾಮು, ಅಂಬರೀಷ್, ಜಗ್ಗುದಾದಾ, ಕರಿಯದಂತಹ ವಿಶಿಷ್ಟ ಅಭಿನಯಕ್ಕೆ ಮನ್ನಣೆ ಇರುವಂತಹ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಮೂಡಿಸಿದ್ದಾರೆ.

ಇದೇ ಮಾರ್ಚ್ 1ಕ್ಕೆ ಬಹು ನಿರೀಕ್ಷಿತ ಯಜಮಾನ ಚಿತ್ರ ತೆರೆ ಕಾಣುತ್ತಿದ್ದು, ಒಡೆಯ, ಕುರುಕ್ಷೇತ್ರದಂತಹ ಚಿತ್ರಗಳು ಒಂದರ ಹಿಂದೆ ಒಂದು ತೆರೆ ಕಾಣಲಿವೆ. ದರ್ಶನ 50ನೇ ಚಿತ್ರವಾ ಗಿರುವ ಕುರುಕ್ಷೇತ್ರ ಬಹುಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು ಗ್ರಾಫಿಕ್ಸ್ ಅಳವಡಿಕೆ ಹಿನ್ನೆಲೆ ಯಲ್ಲಿ ಚಿತ್ರಿಕರಣ ಪೂರ್ಣಗೊಳ್ಳುವುದು ತಡವಾಗಿದೆ. ದರ್ಶನ್ ಅವರ ಚಿತ್ರವನ್ನು ನಿರ್ಮಿಸಲು ಸಾಲು ಸಾಲಾಗಿ ನಿರ್ಮಾಪಕರು ಡೆಟ್ಸ್‍ಗಾಗಿ ಕಾಯುತ್ತಿದ್ದಾರೆ.

Facebook Comments