ಬಾಳೆಹಣ್ಣಿನೊಂದಿಗೆ ಯುವಕನ ತಲೆಯನ್ನೇ ಜಗಿದ ಮದವೇರಿದ ಸಾಕಾನೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಫೆ.16- ಮದವೇರಿದ ಸಾಕಾನೆಯೊಂದು ಬಾಳೆಹಣ್ಣಿನೊಂದಿಗೆ ಯುವಕನ ತಲೆಯನ್ನೇ ಜಗಿದ ಘಟನೆ ಕೋರಾ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ. ಪ್ರತಾಪ್ (20) ಆನೆಯಿಂದ ಗಾಯಗೊಂಡ ಯುವಕ.

ಪ್ರತಾಪ್ ಆನೆಗೆ ಬಾಳೆಹಣ್ಣು ನೀಡಿದ್ದಾನೆ. ಸೊಂಡಿಲಿನಲ್ಲಿ ಬಾಳೆಹಣ್ಣು ಸ್ವೀಕರಿಸಿದ ಮದಗಜ ಹಣ್ಣಿನೊಂದಿಗೆ ಪ್ರತಾಪನ ತಲೆ ಸಮೇತ ಜಗಿದು ನಂತರ ಸೊಂಡಿಲಿನಿಂದ ಎಸೆದಿದೆ.

ಆತನ ಸ್ಥಿತಿ ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸರ್ಕಸ್ ಕಂಪೆನಿಗೆ ಸೇರಿದ ಸಾಕಾನೆ ಇದಾಗಿದ್ದು, ಕಂಪೆನಿ ವಿರುದ್ದ ದೂರು ನೀಡಲು ಪ್ರತಾಪ್ ಕಡೆಯವರು ಮುಂದಾಗಿದ್ದಾರೆ.

Facebook Comments