ಕೋಲಾರದಲ್ಲಿ ಫಲಪುಷ್ಪ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಫೆ.16-ನಗರದ ನ್ಯಾಯಾಲಯದ ಆವರಣದಲ್ಲಿನ ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿ ಇಂದಿನಿಂದ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನ ಮೂರು ಸಾವಿರಕ್ಕೂ ಹೆಚ್ಚು ಹೂಹಣ್ಣುಗಳಿಂದ ಕಳೆಕಟ್ಟಿದೆ.

ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಪ್ರದರ್ಶನದಲ್ಲಿ ವಿಶೇಷವಾಗಿ ಮರಳಿನಲ್ಲಿ ಬಿಡಿಸಿರುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಚಿತ್ರ, ಗುಲಾಬಿ ಹೂಗಳಿಂದ ನಿರ್ಮಿಸಿರುವ ಮಾದರಿ ಮತದಾನ ಕೇಂದ್ರಗಳು ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ.

ಇದಲ್ಲದೆ ಹಣ್ಣು ಮತ್ತು ತರಕಾರಿಗಳಲ್ಲಿ ಪ್ರಾಣಿ, ಕಲಾವಿದರು ಹಾಗೂ ಸಾಹಿತಿಗಳ ಚಿತ್ರಗಳ ಕೆತ್ತನೆಯೂ ಅತ್ಯಾಕರ್ಷಕವಾಗಿ ಮೂಡಿಬಂದಿದೆ.
ಇಂದು ಮತ್ತು ನಾಳೆ ಎರಡು ದಿನ ನಡೆಯಲಿರುವ ಪ್ರದರ್ಶನದಲ್ಲಿ ಅತ್ಯಾಧುನಿಕ ಬೇಸಾಯ ಪದ್ಧತಿಯ ಪ್ರಾತ್ಯಕ್ಷಿಕೆಯೊಂದಿಗೆ ಜಿಲ್ಲೆಯಲ್ಲಿ ಬೆಳೆಯುವ ಹಣ್ಣು-ತರಕಾರಿಗಳ ಪ್ರದರ್ಶನವೂ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

Facebook Comments