ಉಗ್ರರ ರಣಹೇಡಿ ಕೃತ್ಯ ಕುರಿತು ಅಣ್ಣ ಹಜಾರೆ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ.16- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಯೋಧರ ಮಾರಣ ಹೋಮವನ್ನು ಖಂಡಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ ಇದೆ ಎಂದು ಹೇಳಿದ್ದಾರೆ.

ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಅಣ್ಣಾ ಹಜಾರೆ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ವಯಸ್ಸಾಗಿದೆ. ಹೀಗಾಗಿ ಗನ್ ಹಿಡಿಯಲು ನನಗೆ ಸಾಧ್ಯವಿಲ್ಲ. ಆದರೆ ಅವಶ್ಯಕತೆ ಬಿದ್ದರೆ ನನ್ನ ದೇಶಕ್ಕಾಗಿ ಹೋರಾಡುವ ಸೈನಿಕರಿಗಾಗಿ ಸ್ಟೀರಿಂಗ್ ಹಿಡಿಯುವೆ ಎಂದು ಹೇಳಿದ್ದಾರೆ.

ಕಳೆದ ಫೆ.5 ರಿಂದ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Facebook Comments

Sri Raghav

Admin