ಕುವೆಂಪು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 235 ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಯು 2019 ರ ಫೆಬ್ರವರಿ 13 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 2019 ರ ಮಾರ್ಚ್ 28 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಶುಲ್ಕ 100/-. ಇತರೆ ಅಭ್ಯರ್ಥಿಗಳಿಗೆ ರೂ. 200 / – ನಿಗದಿಪಡಿಸಲಾಗಿದೆ.  ಈ ಹುದ್ದೆಗಲ್ಲಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ನಿಯಮಗಳನ್ನು ಪಾಲಿಸಬೇಕು.

ಅರ್ಜಿದಾರರು ಸಹಿ ಮಾಡಿದ ಅರ್ಜಿಯ ತಮ್ಮ ಹಾರ್ಡ್ ಪ್ರತಿಗಳನ್ನು ಕಳುಹಿಸಿ ಯನ್ನು ಪುರಾವೆಗಳ ಫೋಟೊಕಾಪಿಯೊಂದಿಗೆ ತುಂಬಿ, ಹುಟ್ಟಿದ ದಿನಾಂಕದ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರಗಳು, ಜಾತಿಯ ಮತ್ತು ಸಂಬಂಧಿತ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಅಂಚೆಯ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅಂಚೆ ವಿಳಾಸ: ರಿಜಿಸ್ಟ್ರಾರ್ ಕುವೆಂಪು ವಿಶ್ವವಿದ್ಯಾಲಯ,  ಶಂಕರಾಘಟ್ಟ – 577 451,  ಕರ್ನಾಟಕ.

ಆಯ್ಕೆ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ  ಈ ಮುಂದಿನ ಲಿಂಕ್  ಗೆ ಭೇಟಿನೀಡಿ :  https://goo.gl/ve159s

Facebook Comments