ಹುಲಿ ಬಂತು ಹುಲಿ…! ಕೊಳ್ಳೇಗಾಲದಲ್ಲಿ ಗಾಳಿ ಸುದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಫೆ.16- ಕಳೆದ ಹಲವು ದಿನಗಳಿಂದ ತಾಲ್ಲೋಕಿನ ಸೂರಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿ ಪ್ರತ್ಯಕ್ಷ ವಾಗಿರುವ ಕುರಿತು ಗಾಸಿಪ್ ಸುದ್ದಿ ಹರಿದಾಡುತ್ತಿದೆ. ಇದುವರೆಗೂ ಅಧಿಕೃತವಾಗಿ ಯಾರು ಹುಲಿ ನೋಡಿದ ಬಗ್ಗೆ ಮಾಹಿತಿಯಿಲ್ಲ. ಹಾಗಾದರೆ ಹುಲಿ ಪ್ರತ್ಯಕ್ಷವಾಗಿರುವುದು ನಿಜವೆ? ಅಥವಾ ಇದು ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ಸೃಷ್ಠಿಸಿರುವ ಹೈ ಡ್ರಾಮಾವೆ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ 20 ದಿನಗಳ ಹಿಂದೆ ಜೋಗಿರಾಜ್ ಎಂಬವರ ಜಮೀನ ಬಳಿ ಗುಡ್ಡವೊಂದರಲ್ಲಿ ಹುಲಿಯೊಂದು ಕಾಡು ಹಂದಿ ತಿಂದು ಹೋಗಿರುವ ಬಗ್ಗೆ ರೈತರು ಹೇಳುತ್ತಾರೆ. ಕೂಲಿ ಕಾರ್ಮಿಕ ಮಹಿಳೆ ರಾತ್ರಿ ವೇಳೆಯಲ್ಲಿ ಘರ್ಜನೆ ಕೇಳಿದೆ. ನಾಯಿಗಳು ಓಡಿ ಹೋದವು ನಂತರ ಹುಲಿ ಓಡಿ ಹೋಯಿತು ಎಂದು ಹೇಳುತ್ತಾರೆ.

ಆ ಕತ್ತಲೆಯಲ್ಲಿ ಓಡಿ ಹೋದದ್ದು ಹುಲಿಯೇ ? ಅಥವಾ ಇನ್ನಾವುದೋ ಕಾಡು ಪ್ರಾಣಿಯೇ ಎಂಬುದು ಸ್ಪಷ್ಟವಾಗಿಲ್ಲ. ಕಿಡಿಗೇಡಿಗಳು ಕಾಡಂಚಿಗೆ ಹೋಗಿ ಬೆಂಕಿ ಹಚ್ಚುವುದನ್ನು ತಪ್ಪಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿರಬಹುದು ಇಲ್ಲವೇ ಕೆಲ ಬಂಡವಾಳ ಶಾಹಿಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದರಿಂದ ಅರಣ್ಯ ಇಲಾಖೆಯವರು ಈ ರೀತಿ ಗಾಸಿಪ್ ಸುದ್ದಿ ಹರಡಿರಬಹುದೆಂದೂ ಹೇಳಲಾಗುತ್ತಿದೆ.

ಒಟ್ಟಾರೆ ಉದ್ದೇಶ ಯಾವುದೇ ಇರಲಿ ಹುಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಮುಂದೆ ಸಂಭವಿಸ ಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂಬುದು ಪ್ರಜ್ಞಾವಂತರ ಅನಿಕೆ.

Facebook Comments