ಪಾಕ್ ಒಳಗೆ ದಾಳಿಗೆ ಇದು ಸೂಕ್ತ ಸಮಯ : ಉದ್ಧವ್ ಠಾಕ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ.16- ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಪಾಕಿಸ್ತಾನದ ಒಳಗೆ ಆಕ್ರಮಣ ಮಾಡಲು ಇದು ಸೂಕ್ತ ಸಮಯ ಎಂದು ಹೇಳಿದೆ.

ಇದೇ ವೇಳೆ ಗುಪ್ತಚರ ಇಲಾಖೆ ಬಗ್ಗೆ ಮಾತನಾಡಿರುವ ಉದ್ಧವ್ ಠಾಕ್ರೆ, ಗುಪ್ತಚರ ಇಲಾಖೆ ವೈಫಲ್ಯದಿಂದ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣವಾಗಿದ್ದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು. ಈಗ ಪಾಕಿಸ್ತಾನದಲ್ಲಿ ನುಗ್ಗಿ ಪಾಕ್ ಒಳಗೆ ದಾಳಿ ಮಾಡುವುದಕ್ಕೆ ಸೂಕ್ತ ಸಮಯ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮೈತ್ರಿಯ ವಿಷಯಗಳಿರುತ್ತವೆ. ಆದರೆ ಪಾಕಿಸ್ತಾನವನ್ನು ಬಿಡಬಾರದು. ಪಾಕ್ ಗೆ ತಕ್ಕ ಪಾಠ ಕಲಿಸಬೇಕೆಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Facebook Comments

Sri Raghav

Admin