ಇಂದಿನ ಪಂಚಾಗ ಮತ್ತು ರಾಶಿಫಲ (16-02-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಲ್ಲಿಯವರೆಗೂ ಮನುಷ್ಯನ ಪುಣ್ಯವು ಇರುತ್ತದೆಯೋ ಅಲ್ಲಿಯವರೆಗೂ ಅವನು ಸ್ವರ್ಗಲೋಕದಲ್ಲಿ ಸಂತೋಷ ಪಡುತ್ತಾನೆ. ಪುಣ್ಯವು ಮುಗಿದ ಮೇಲೆ ತನಗಿಷ್ಟವಿಲ್ಲದಿದ್ದರೂ ಕಾಲದಿಂದ ಚಲಿಸಲ್ಪಟ್ಟು ತಲೆಕೆಳಗಾಗಿ ಬೀಳುತ್ತಾನೆ.  -ಭಾಗವತ

# ಪಂಚಾಂಗ : ಶನಿವಾರ, 16.02.2019
ಸೂರ್ಯ ಉದಯ ಬೆ.06.42 / ಸೂರ್ಯ ಅಸ್ತ ಸಂ.06.25
ಚಂದ್ರ ಉದಯ ಮ.03.07/ ಚಂದ್ರ ಅಸ್ತ ರಾ.04.20
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಮಾಘ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ಬೆ.11.02)
ನಕ್ಷತ್ರ: ಆರಿದ್ರ (ರಾ.07.05)/ ಯೋಗ: ಪ್ರೀತಿ (ರಾ.12.00)
ಕರಣ: ಭದ್ರೆ-ಭವ (ಬೆ.11.02-ರಾ.09.40)
ಮಳೆ ನಕ್ಷತ್ರ: ಧನಿಷ್ಠ / ಮಾಸ: ಕುಂಭ / ತೇದಿ: 04

# ರಾಶಿ ಭವಿಷ್ಯ

ಮೇಷ: ಶುಭ ಕಾರ್ಯಗಳಿಗೆ ಹೋಗಲು ಅಣಿಯಾಗುವಿರಿ. ಮಕ್ಕಳಿಂದ ಸುಖವಿರುವುದು
ವೃಷಭ: ಕಣ್ಣಿನ ತೊಂದರೆ ಕಂಡುಬರುವುದು
ಮಿಥುನ: ಆರೋಗ್ಯ ಕ್ಷೀಣವಾಗುವುದು
ಕಟಕ: ಸರ್ಕಾರಿ ಉದ್ಯೋಗಿ ಗಳಿಗೆ ಇತರರನ್ನು ಸಂತೋಷ ಪಡಿಸುವುದೆ ದೊಡ್ಡ ಕೆಲಸ
ಸಿಂಹ: ವ್ಯಾಪಾರ- ವ್ಯವಹಾರ ಗಳಲ್ಲಿ ಹಣ ಸಿಲುಕುವುದು
ಕನ್ಯಾ: ಇತರರು ನಿಮಗೆ ಯಾವುದೇ ರೀತಿಯಲ್ಲಿ ಸಹಾಯಕರಾಗಿರುವುದಿಲ್ಲ
ತುಲಾ: ಚತುರತೆಯಿಂದ ಕೆಲಸ- ಕಾರ್ಯಗಳ ನಿರ್ವಹಣೆ ಮಾಡಬೇಕು
ವೃಶ್ಚಿಕ: ಒಳ್ಳೆಯ ಕೀರ್ತಿಯನ್ನು ಸಂಪಾದಿಸುವಿರಿ
ಧನುಸ್ಸು: ಬೆಲೆಬಾಳುವ ವಸ್ತುಗಳನ್ನು ಕಳೆಯುವಿರಿ
ಮಕರ: ಕಲಹಗಳನ್ನು ಎದುರಿಸಬೇಕಾಗುತ್ತದೆ
ಕುಂಭ: ನಿಮ್ಮ ಮತ್ತು ಮಕ್ಕಳ ಆರೋಗ್ಯ ಸ್ವಲ್ಪ ಮಟ್ಟಿಗೆ ಕೆಡುವುದು. ಎಲ್ಲಾ ಜವಾಬ್ದಾರಿ ಹೊರುವಿರಿ
ಮೀನ: ಕಳ್ಳತನವಾಗುವ ಸಾಧ್ಯತೆಗಳು ಹೆಚ್ಚಾಗಿವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments