ಗೃಹ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಫೆ.17- ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಚಿಕ್ಕಮಗಳೂರು, ಸಖರಾಯಪಟ್ಟಣ, ಕಡೂರು, ಬೀರೂರು, ತರೀಕೆರೆ, ಶಿವನಿ, ಅಜ್ಜಂಪುರ, ಕಾಟಿಗನೆರೆ, ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಕಳಸಾಪುರ, ಲಿಂಗದಹಳ್ಳಿ, ಹರಿಹರಪುರ, ಜಯಪುರ, ಬೆಳವಾಡಿ, ಹೋಚಿಹಳ್ಳಿ ಹಾಗೂ ಜಾವೂರುಗಳಲ್ಲಿ ಇರುವ ಘಟಕಗಳ ಘಟಕಾಧಿಕಾರಿಗಳಿಂದ ಅರ್ಜಿಯನ್ನು ಪಡೆದು ಫೆ.26 ರೊಳಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳ ಕಾರ್ಯಾಲಯ, ಜ್ಯೋತಿನಗರ, ಚಿಕ್ಕಮಗಳೂರು, ದೂ.ಸಂ.08262-220379 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದೆ.

Facebook Comments