ಬೈಕ್‍ಗಳ್ಳನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಫೆ.17-ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉದಯಗಿರಿ ಠಾಣೆ ಪೊಲೀಸರು, ಬಂಧಿತನಿಂದ ಟಿವಿಎಸ್ ಅಪಾಚಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಗೌಸಿಯಾನಗರ ವಾಸಿ ಸಯ್ಯದ್ ಶೋಹೆಬ್(23) ಬಂಧಿತ ಆರೋಪಿ.

ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿನ ಮಹದೇವಪುರ ಮುಖ್ಯರಸ್ತೆ ಎಸ್‍ಆರ್ ಪೆಟ್ರೋಲ್ ಬಂಕ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಂಬರ್ ಪ್ಲೇಟ್ ಇಲ್ಲದ ಟಿವಿಎಸ್ ಅಪಾಚಿ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಈತನನ್ನು ಬಂಧಿಸಿದ್ದಾರೆ.

ಸಯ್ಯದ್ ಶೋಹೆಬ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನಿಂದ ಈ ವಾಹವನ್ನು ಗೌಸಿಯಾ ನಗರದ ವಾಸಿ ಮೋಹಿತ್ ಖಾನ್ ಎಂಬಾತ ಕಳವು ಮಾಡಿಕೊಂಡು ಬಂದಿದ್ದು ಇದನ್ನು ಮಾರಾಟ ಮಾಡಲು ತನಗೆ ನೀಡಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಶೋಹೆಬ್ ನೀಡಿದ ಮಾಹಿತಿಗೆ ಮೇರೆಗೆ ತಲೆಮರೆಸಿಕೊಂಡಿರುವ ಮೋಹಿತ್ ಖಾನ್‍ನ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments