ಹುತಾತ್ಮ ಯೋಧರಿಗೆ ಹರಿದುಬಂತು ನೆರವಿನ ಮಹಾಪೂರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.17- ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಲ್ಲ ಹುತಾತ್ಮರ ಕುಟುಂಬಗಳಿಗೆ ಜನರಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪುಲ್ವಾಮಾದಲ್ಲಿ ಉಗ್ರನ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ 38 ಯೋಧರ ಕುಟುಂಬಕ್ಕೆ ಭಾರತ್ ಕೆ ವೀರ್ ವೆಬ್‍ಸೈಟ್ ಮೂಲಕ ಅಭೂತಪೂರ್ವ ನೆರವು ದೊರೆಯುತ್ತಿದೆ. ಇದರಿಂದ ವೆಬ್‍ಸೈಟ್ ಕಾರ್ಯಾಚರಣೆ ವೇಗ ನಿಧಾನವಾಗಿದೆ ಎಂದು ಹೇಳಿದ್ದಾರೆ.

ಜನರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡುತ್ತಿರುವ ಬಗ್ಗೆ ಟ್ವಿಟ್ಟರ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿರುವ ಸಚಿವರು, ವೆಬ್‍ಸೈಟ್‍ಗೆ ನೆರವಿನ ಮಹಾಪೂರವೇ ಹರಿದುಬರುತ್ತಿದ್ದು, ಜನರ ಈ ಬೆಂಬಲಕ್ಕೆ ಇಲಾಖೆ ಹೆಮ್ಮೆಪಡುತ್ತದೆ ಎಂದು ತಿಳಿಸಿದ್ದಾರೆ.

ಭಾರಿ ನೆರವು ದೊರೆಯುತ್ತಿರುವುದರಿಂದ ಕೆಲ ಸಮಯ ವೆಬ್‍ಸೈಟ್ ಕಾರ್ಯಾಚರಣೆ ವೇಗ ನಿಧಾನಗೊಳ್ಳುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ. ಅನ್ಯರು ಸಹ ಯೋಧರ ಕುಟುಂಬಗಳಿಗೆ ನೆರವಿನ ಹೆಸರು ಹೇಳಿ ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲೆಂದೇ ಕಳೆದ ವರ್ಷ ಸೆ. 6ರಂದು ಈ ವೆಬ್‍ಸೈಟ್‍ಗೆ ಚಾಲನೆ ನೀಡಲಾಗಿದೆ. ಕೇಂದ್ರ ಗೃಹ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈ ಸಮಿತಿಯಲ್ಲಿರುವ 6 ಸದಸ್ಯರಲ್ಲಿ ಬಾಲಿವುಟ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಕೋಚ್ ಪುಲೆಲ್ ಗೋಪಿಚಂದ್ ಸಹ ಇದ್ದಾರೆ.

Facebook Comments