ಭಾರತದ ರಾಷ್ಟ್ರಧ್ವಜ ಪ್ರದರ್ಶಿಸಿದ್ದಕ್ಕೆ ಖಾಸಗಿ ಶಾಲೆ ನೋಂದಣಿ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಧ್,ಫೆ.17- ಖಾಸಗಿ ಶಾಲೆಯೊಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಧ್ವಜ ಪ್ರದರ್ಶಿಸಿ, ಹಾಡೊಂದಕ್ಕೆ ನೃತ್ಯ ಮಾಡಿರುವುದಕ್ಕೆ ಆ ಶಾಲೆಯ ನೋಂದಣೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ.

ಮಾಮಾ ಬೇಬಿ ಕೇರ್ ಕೇಂಬ್ರಿಜ್ ಸ್ಕೂಲ್‍ನ ಈ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವಂತಿದೆ ಎಂದು ಆರೋಪಿಸಿ ಶಾಲೆಯ ನೋಂದಣಿಯನ್ನೇ ರದ್ದುಪಡಿಸಲಾಗಿದೆ.

ಈ ಸಂಬಂಧ ಸಿಂಧ್ ಇನ್ಸ್‍ಪೆಕ್ಷನ್ ಮತ್ತು ಖಾಸಗಿ ಸಂಸ್ಥೆಗಳ ನೋಂದಣಿ ನಿರ್ದೇಶನಾಲಯ ಶಾಲೆಯ ಮಾಲೀಕನಿಗೆ ನೋಟಿಸ್ ಜಾರಿಗೊಳಿಸಿದೆ. ಮೂರು ಜನರ ಒಂದು ವಿಶೇಷ ತಂಡವನ್ನು ರಚಿಸಿ ಪ್ರಕರಣದ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವುದು ಪಾಕಿಸ್ತಾನದ ರಾಷ್ಟ್ರೀಯ ಘನತೆಯ ವಿರುದ್ಧ. ಇದನ್ನ ಪಾಕಿಸ್ತಾನ ಎಂದೂ ಸಹಿಸಲಾಗದು ಎಂದು ಡಿಐಆರ್‍ಪಿಐಎಸ್ ರಿಜಿಸ್ಟ್ರಾರ್ ರಾಫಿಯಾ ಜಾವೇದ್ ಹೇಳಿದ್ದಾರೆ.

ಶಾಲೆಯ ಆಡಳಿತ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿವಿಧ ದೇಶಗಳ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಇದನ್ನ ತಿರುಚಿದ್ದಾರೆ ಎಂದು ಈ ಕುರಿತು ಶಾಲೆಯ ಪ್ರಾಂಶುಪಾಲರಾದ ಫಾತಿಮಾ ತಿಳಿಸಿದ್ದಾರೆ.

Facebook Comments