ಹುತಾತ್ಮರ ಕುಟುಂಬಗಳಿಗೆ ಇನ್ಫೋಸಿಸ್‌ ಪ್ರತಿಷ್ಠಾನದಿಂದ ತಲಾ 10 ಲಕ್ಷ ರೂ. ನೆರವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಬಲಿಯಾದ 40 ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ನೆರವಿನ ಮಮಹಾಪೂರವೇ ಹರಿದು ಬರುತ್ತಿದೆ, ಈ ನಡುವೆ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಪ್ರತಿ ಯೋಧನ ಕುಟುಂಬಕ್ಕೆ 10 ಲಕ್ಷ ರೂ. ನೀಡಲಾಗುವುದು ಎಂದು ಇನ್ಫೋಸಿಸ್‌ ಪ್ರತಿಷ್ಠಾನ ಘೋಷಣೆ ಮಾಡಿದೆ.

ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಈ ಕುರಿತು ಮಾಹಿತಿ ನೀಡಿದ್ದಾರೆ.   ದೇಶಕ್ಕಾಗಿ ಪ್ರಾಣತ್ಯಾಗ ನೀಡಿದ್ದಾರೆ. ಕೂಡಲೇ ಅವರಿಗೆ ಆರ್ಥಿಕ ನೆರವು ನೀಡಬೇಕು ಎಂದುಕೊಂಡಡೆ. ಹಣಕ್ಕಿಂತ ಯೋಧರ ಪ್ರಾಣ ಮುಖ್ಯ ಎಂದು ಅವರು ಹೇಳಿದರು.

“ರಾಷ್ಟ್ರಕ್ಕೆ ಬಲಿದಾನ ಮಾಡಿದವರ ಜತೆ ನಾನಿದ್ದೇನೆ. ಮಂಡ್ಯ ಯೋಧ ಗುರು ಕುಟುಂಬದವರನ್ನು ಭೇಟಿ ನೀಡಿ ಸಾಂತ್ವನ ಹೇಳಲಿದ್ದೇನೆ.ನನಗೆ ಪ್ರಚಾರ ಬೇಕಾಗಿಲ್ಲ. ಆದರೆ ನನ್ನ ಸಂಸ್ಥೆಯ ಕೆಲಸದಿಂದ ಪ್ರೇರಣೆಯಾಗಿ ಬೇರೆಯವರೂ ಸಹಾಯ ಮಾಡಿದರೆ ಅದೇ ಸಾರ್ಥಕ.” ಅವರು ಹೇಳಿದ್ದಾರೆ.

ಮಂಡ್ಯದ ಯೋಧ ಗುರು ಅವರ ನಿವಾಸಕ್ಕೆ ಖುದ್ದು ಭೇಟಿ ನೀಡುತ್ತೇನೆ. ಮುಂದಿನ ವಾರದಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಆರ್ಥಿಕ ನೆರವು ನೀಡಲಾಗುವುದು ಎಂದು ಸುಧಾ ಮೂರ್ತಿ ಸ್ಪಷ್ಟಪಡಿಸಿದರು.

ಕಳೆದ ಗುರುವಾರ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರು ತೆರಳುತ್ತಿದ್ದ ವಾಹನಗಳಿಗೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ 40 ಯೋಧರು ಮೃತಪಟ್ಟರು.

ಮಂಡ್ಯದ ಮದ್ದೂರು ತಾಲೂಕಿನ ಗುಡಿಗೇರಿ ಗ್ರಾಮದ ಗುರು ಮೃತಪಟ್ಟಿದ್ದರು. ಗುರು ಕುಟುಂಬಕ್ಕೆ ರಾಜ್ಯ ಸರಕಾರ ಈಗಾಗಲೇ 25 ಲಕ್ಷ ರೂ. ಪರಿಹಾರ ನೀಡಿದೆ. ಗುರು ಪತ್ನಿ ಗೆ ಸರ್ಕಾರಿ ಉದ್ಯೋಗ ನೀಡುವುದಾಗ ಘೋಷಿಸಲಾಗಿದೆ.

Facebook Comments

Sri Raghav

Admin