ಬಲ್ಗೇರಿಯಾ ವಿದೇಶಾಂಗ ಸಚಿವರ ಜತೆ ಸುಷ್ಮಾ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಸೋಫಿಯಾ(ಬಲ್ಗೇರಿಯಾ), ಫೆ.17-ಬಲ್ಗೇರಿಯಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಸಹವರ್ತಿ ಎಕಾಟೆರಿನಾ ಝಹರೀವಾ ಅವರನ್ನು ಭೇಟಿ ಮಾಡಿದ ದ್ವಿಪಕ್ಷೀಯ ವಿಚಾರಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.

ಆರ್ಥಿಕ, ಕೃಷಿ, ಆರೋಗ್ಯ, ಔಷಧ ಉದ್ಯಮ, ಪ್ರವಾಸೋದ್ಯಮ, ಮಾಹಿತ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯ ಬಗ್ಗೆ ಉಭಯ ನಾಯಕರು ವ್ಯಾಪಕ ಚರ್ಚೆ ನಡೆಸಿದರು.

ಸುಷ್ಮಾ ಎರಡು ದಿನಗಳ ಕಾಲ ಬಲ್ಗೇರಿಯಾ ಪ್ರವಾಸ ಕೈಗೊಂಡಿದ್ದಾರೆ. ಬಲ್ಕಾನ್ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಥಮ ವಿದೇಶಾಂಗ ವ್ಯವಹಾರ ಸಚಿವೆ ಎಂಬ ಹೆಗ್ಗಳಿಕೆಗೆ ಸ್ವರಾಜ್ ಪಾತ್ರರಾಗಿದ್ದಾರೆ.

ಸೋಪಿಯಾದಲ್ಲಿ ನಿಯೋಗ ಮಟ್ಟದ ಮಾತುಕತೆಗೆ ಮುನ್ನ ಸುಷ್ಮಾ ಸ್ವರಾಜ್ ಅವರು ಬಲ್ಗೇರಿಯಾದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಕಾಟೆರಿನಾ ಝಹರೀವಾ ಅವರೊಂದಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗಹನ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಲ್ಗೇರಿಯಾ ಪ್ರವಾಸ ಕೈಗೊಂಡಿದ್ದರು. ಆದಾದ ನಂತರ ಬಲ್ಕಾನ್ ದೇಶಕ್ಕೆ ಸುಷ್ಮಾ ಭೇಟಿ ಉಭಯ ದೇಶಗಳ ನಡುವಣ ಸಂಬಂಧ ವೃದ್ದಿಗೆ ಸಹಕಾರಿಯಾಗಿದೆ.

Facebook Comments