ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್ ಬಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18 -ಐಟಿ ಸಿಟಿ ಬೆಂಗಳೂರಿನಲ್ಲಿ ಫೆ.20 ರಿಂದ 24ರವರೆಗೆ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಏರ್ಬಸ್ ಪಾಲ್ಗೊಳ್ಳುತ್ತಿದೆ. ಇದು ಏರ್ಬಸ್‍ನ ಅತಿದೊಡ್ಡ ಪಾಲ್ಗೊಳ್ಳುವಿಕೆ ಯಾಗಿದ್ದು, ಇಲ್ಲಿ ವೈಮಾನಿಕ ಮತ್ತು ಸ್ಥಿರತೆಯ ಪ್ರದರ್ಶನಗಳನ್ನು ನಡೆಸಲಿದೆ.

ಹೆಲಿಕಾಪ್ಟರ್ ಕ್ಷೇತ್ರದಲ್ಲಿ ಎಚ್225ಎಂ ಮಿಲಿಟರಿ ಆವೃತ್ತಿಯ ಏರ್ಬಸ್, ಎಚ್225 ಸೂಪರ್ ಪೂಮಾ ಹೆಲಿಕಾಪ್ಟರ್, ಸಾರ್ವಕಾಲಿಕ ಹಾರಾಟಕ್ಕೆ ಒಗ್ಗಿಕೊಳ್ಳುವಂತಹ, ಮಲ್ಟಿರೋಲ್ ಪೋರ್ಸ್ ಮಲ್ಟಿಫ್ಲೈಯರ್ ಎಎಸ್565 ಎಂಬಿಇ, ಎಚ್135 ಮತ್ತು ಎಚ್145 ಹೆಲಿಕಾಪ್ಟರ್‍ಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಏರ್ಬಸ್‍ನ ಎ330 ನಿಯೋ ಹೊಸ ಪೀಳೀಗೆಯ ವಾಣಿಜ್ಯ ಏರ್‍ಕ್ರಾಫ್ಟ್ ಮಾದರಿಗಳಾದ ಎ330-ಎ321 ಮತ್ತು ಎಟಿಆರ್ 72-600 ಏರ್‍ಕ್ರಾಫ್ಟ್‍ಗಳು ಪ್ರಮುಖ ಆಕರ್ಷಣೆಯಾಗಿವೆ. ಇದಲ್ಲದೆ, ಏರ್ಬಸ್‍ನ ಅಡ್ವಾನ್ಡ್ಸ್ ಇನ್‍ಸ್ಪೆಕ್ಷನ್ ಡ್ರೋಣ್ ಮತ್ತು ಅದರ ವೈಶಿಷ್ಟ್ಯತೆಗಳ ಮಾಹಿತಿಗಳು ವೀಕ್ಷಕರಿಗೆ ಸಿಗಲಿವೆ.

ಇದೇ ವೇಳೆ ಏರ್ಬಸ್ ತನ್ನ ಸಮೂಹ ಸಂಸ್ಥೆಗಳಾದ ಸಟಾಏರ್ ಮತ್ತು ನವ್‍ಬ್ಲ್ಯೂನ ಸೇವೆಗಳಾದ ಸ್ಕೈವೈಸ್ ಆಧಾರಿತ ಡಿಜಿಟಲ್ ಸೇವೆಗಳನ್ನು ಪ್ರದರ್ಶಿಸಲಿದೆ. ಏರ್‍ಕ್ರಾಫ್ಟ್ ಪರಿಶೀಲನೆಗೆಂದು ಅಭಿವೃದ್ಧಿ ಪಡಿಸಲಾಗಿರುವ ಡ್ರೋಣ್ ಆಧಾರಿತ ವ್ಯವಸ್ಥೆಯನ್ನೂ ಏರ್ಬಸ್ ಇಲ್ಲಿ ಪ್ರದರ್ಶಕ್ಕಿಡಲಿದೆ ಎಂದು ಏರ್ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಆನಂದ್ ಇಸ್ಟ್ಯಾನ್ಲಿ ತಿಳಿಸಿದ್ದಾರೆ.

ಸ್ಥಿರ ಮತ್ತು ಹಾರಾಟ ಪ್ರದರ್ಶನ:  ಈ ಬಾರಿ ಏರೋ ಇಂಡಿಯಾದಲ್ಲಿ ಏರ್ಬಸ್‍ನ ಪ್ರಮುಖ ಆಕರ್ಷಣೆಯೆಂದರೆ ಎ330ನಿಯೋ. ಇದು ಏರ್ಬಸ್‍ನ ಇತ್ತೀಚಿನ ಸೇರ್ಪಡೆಯಾಗಿದೆ. ಇದು ಆಧುನಿಕ ಉತ್ಪನ್ನಗಳಿಂದ ತಯಾರಾಗಿದ್ದು, ಹೊಸದಾದ ಗರಿಷ್ಠ ಗಾತ್ರದ ರೆಕ್ಕೆಗಳು, ಸಮಗ್ರವಾದ ಶಾರ್ಕ್‍ಲೆಟ್‍ಗಳು, ಅತ್ಯುತ್ತಮ ಸಾಮಥ್ರ್ಯದ ಎಂಜಿನ್‍ಗಳನ್ನು ಹೊಂದಿದೆ.

ಪ್ರತಿಭೆ ಸ್ವಾಧೀನ:  ಈ ಬಾರಿ ಏರೋ ಇಂಡಿಯಾದಲ್ಲಿ ಏರ್ಬಸ್ ಪ್ರತಿಭೆಗಳ ಅನ್ವೇಷಣೆ ಮಾಡಲಿದೆ. ಅಂದರೆ, ಫೆ.23 ಮತ್ತು 24 ರಂದು ತನ್ನ ಮಳಿಗೆಗಳಲ್ಲಿ ಪ್ರತಿಭೆಗಳ ಅನ್ವೇಷಣೆ ಪ್ರಕ್ರಿಯೆ ನಡೆಸಲಿದೆ. ಏವಿಯೋನಿಕ್ಸ್ ಸಾಫ್ಟ್‍ವೇರ್, ಏರ್‍ಕ್ರಾಫ್ಟ್ ಸಿಸ್ಟಂ ಸಿಮ್ಯುಲೇಷನ್ ಮತ್ತು ಏರ್‍ಫ್ರೇಮ, ಸ್ಟ್ರಕ್ಚರ್ ಅಲ್ಲದೆ, ಎಪಿಐ ಡೆವಲಪ್‍ಮೆಂಟ್, ಫುಲ್‍ಸ್ಟ್ಯಾಕ್ ಡೆವಲಪ್ ಮೆಂಟ್, ಬಿಗ್ ಡೇಟಾ, ಕ್ಲೌಡ್ ಮತ್ತು ಡೆವ್‍ಓಪ್‍ಸ್‍ನಲ್ಲಿ ನೈಪುಣ್ಯತೆ ಇರುವ ಸಾರ್ವಜನಿಕರು ಮತ್ತು ಇತರೆ ವರ್ಗದ ಪ್ರತಿಭೆಗಳನ್ನು ಅನ್ವೇಷಣೆ ಮಾಡಲಿದೆ.

Facebook Comments