ಒಂದೇ ಕ್ಷೇತ್ರದ ಸದಸ್ಯರಿಂದ 3 ಬಾರಿ ಬಿಬಿಎಂಪಿ ಬಜೆಟ್ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18- ಬೃಹತ್ ಬೆಂಗಳೂರು ನಗರ ಮಹಾನಗರ ಪಾಲಿಕೆಯ 4ನೇ ಬಜೆಟ್ ಇದಾಗಿದೆ. ವಿಶೇಷವೆಂದರೆ ಮೈತ್ರಿ ಆಡಳಿತದಲ್ಲಿ ಒಂದೇ ವಿಧಾನಸಭಾ ಕ್ಷೇತ್ರದ ಸದಸ್ಯರು ಮೂರು ಭಾರಿ ಬಜೆಟ್ ಮಂಡಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಸದಸ್ಯರೇ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಮೂರನೇ ಭಾರಿ ಬಜೆಟ್ ಮಂಡಿಸುತ್ತಿರುವುದು ವಿಶೇಷ.

ಈ ಮೊದಲು ಶಂಕರಮಠ ವಾರ್ಡ್ ಸದಸ್ಯಎಮ್. ಶಿವರಾಜು ಬಜೆಟ್ ಮಂಡಿಸಿದರೆ, ಮಾರಪ್ಪನಪಾಳ್ಯ ವಾರ್ಡ್‍ನ ಸದಸ್ಯರಾದ ಮಹಾದೇವ ಅವರು, ಕಳೆದ ಬಾರಿ ಬಜೆಟ್ ಮಂಡಿಸಿದ್ದರು. ಈ ಬಾರಿ ಮಾಜಿ ಉಪಮಹಾಪೌರರಾದ ವೃಷಭಾವತಿ ನಗರ ವಾರ್ಡ್‍ನ ಸದಸ್ಯರಾದ ಹೇಮಲತಾ ಗೋಪಾಲಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದರು.

ಸ್ವಾಭಾವಿಕವಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಾರ್ಡ್‍ಗಳಿಗೆ ಅವರ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಮೀಸಲಿಡುವುದು ಸಹಜ ಒಂದೇ ಕ್ಷೇತ್ರದ ಮೂವರು ಸದಸ್ಯರು ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಜೆಟ್ ಮಂಡಿಸಿರುವ ಹಿನ್ನಲೆಯಲ್ಲಿ ಶಂಕರಮಠ ವಾರ್ಡ್, ಮಾರಪ್ಪನಪಾಳ್ಯ, ವೃಷಭಾವತಿ ನಗರ ವಾರ್ಡ್‍ಗಳಿಗೆ ಹೆಚ್ಚಿನ ಅನುದಾನ ದೊರೆತಿರುವುದರ ಜತೆಗೆ ಮಹಾಲಕ್ಷೀ ಲೇಔಟ್ ಕ್ಷೇತ್ರಕ್ಕೂ ಸಾಕಷ್ಟು ಅನುದಾನ ಸಿಕ್ಕಿದೆ.

Facebook Comments