ಬೆಂಗಳೂರು ಏರ್ ಷೋಗೆ ಭಾರಿ ಬಿಗಿ ಭದ್ರತೆ, ಇದ್ದಕ್ಕಿದ್ದಂತೆ ಲ್ಯಾಂಡ್ ಆದ ತೇಜಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18-ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಏರ್ ಶೋ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆಂಗಳೂರು ಪೊಲೀಸರಿಗೆ ರಾಜ್ಯದ ಇಂಟೆಲಿಜೆನ್ಸ್ ಮತ್ತು ಏರ್‍ಶೋ ಇಂಟೆಲಿಜೆನ್ಸ್‍ನವರು ಸಾಥ್ ನೀಡಿದ್ದಾರೆ.

ಫೆ.20 ರಿಂದ 24ರವರೆಗೆ ನಡೆಯಲಿರುವ ಏರ್‍ಶೋ ಹಿನ್ನೆಲೆಯಲ್ಲಿ ನಗರದಲ್ಲಿನ ಪಿಜಿ, ಅಪಾರ್ಟ್‍ಮೆಂಟ್ಸ್‍ಗಳು, ಹೊಟೇಲ್‍ಗಳು, ರೆಸ್ಟೋರೆಂಟ್‍ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹೊಸದಾಗಿ ಯಾರ್ಯಾರು ವಾಸವಿದ್ದಾರೆ.

ಅವರು ವೃತ್ತಿ ಏನು, ಅವರು ಯಾವ ಮೂಲದವರು ಮಾಹಿತಿಯನ್ನು ಸಂಗ್ರಹಿಸಲು ಬೆಂಗಳೂರು ವಿಭಾಗದಲ್ಲಿನ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಏರ್ ಫೋರ್ಸ್ ಒಳಗೆ ಹಾಗೂ ಹೊರಗೆ ಸಿಐಎಸ್‍ಎಫ್‍ನಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಎರಡು ಕಿಲೋಮೀಟರ್ ಸುತ್ತಮುತ್ತ ಸಿಸಿ ಟಿವಿ ಅಳವಡಿಸಲಾಗಿದೆ.

ಟೇಕ್ ಆಫ್ ಮೊದಲ್ಲೇ ತೇಜಸ್ ಲ್ಯಾಡಿಂಗ್ : ಬೆಂಗಳೂರು, ಫೆ.18-ಏರ್ ಷೋಗೆ ಕ್ಷಣಗಣನೆ ಇರುವಾಗಲೇ ಟೇಕ್ ಆಫ್ ಮೊದಲೆ ತೇಜಸ್ ವಿಮಾನ ಎಮರ್ಜನ್ಸಿ ಲ್ಯಾಂಡ್ ಆಗಿದ್ದರಿಂದ ಒಂದು ಕ್ಷಣ ಆತಂಕ ಉಂಟಾಗಿತ್ತು.

ಯಲಹಂಕ ಏರ್‍ಪೋರ್ಸ್ ಸ್ಟೇಶನ್ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ತೇಜಸ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಏಕಾಏಕಿ ಪ್ಯಾರಾಚೂಟ್ ಓಪನ್ ಆದ ಕಾರಣ ತಕ್ಷಣ ಎಮರ್ಜನ್ಸಿ ಲ್ಯಾಡಿಂಗ್ ಮಾಡಲಾಯಿತು.  ತಕ್ಷಣ ಎರಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

Facebook Comments