ಬಿಬಿಎಂಪಿ ಬಜೆಟ್ – 2019 ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18- ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ, ಆರ್ಥಿಕ ಭದ್ರತೆಗೆ ಮಹಾಲಕ್ಷ್ಮಿ ಯೋಜನೆ, ಕತ್ತಲಿನಿಂದ ಬೆಳಕಿನೆಡೆಗೆ ರೋಶಿನಿ ಯೋಜನೆ, ಸ್ವಯಂ ಉದ್ಯೋಗ ಹೊಂದಲು ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ ವಾಹನಗಳ ಅನ್ನಪೂರ್ಣೇಶ್ವರಿ ಯೋಜನೆ ಸೇರಿದಂತೆ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವ ಹಲವು ಮಹತ್ವದ ಯೋಜನೆಗಳನ್ನು ಇಂದು ಬಿಬಿಎಂಪಿ ಮೈತ್ರಿ ಆಡಳಿತದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮೊದಲ ಮಹಿಳಾ ಅಧ್ಯಕ್ಷರಾದ ಹೇಮಲತಾ ಗೋಪಾಲಯ್ಯ ಅವರು ಮಹಿಳೆಯರ ಮನಗೆಲ್ಲುವ ಪಿಂಕ್ ಬಜೆಟ್ ಮಂಡಿಸಿದರು.

# ಬಜೆಟ್ ನ ಹೈಲೈಟ್ಸ್ :
– ಬಿಬಿಎಂಪಿ ರಚನೆಯಾದ ಮೇಲೆ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ.
– ಬಿಬಿಎಂಪಿ ಶಾಲೆ ಕಟ್ಟಡಗಳ ದುರಸ್ತಿಗೆ ಹೆಚ್ಚಿನ ಅನುದಾನ.
– ಸಿದ್ದಗಂಗಾ ಶಿವಕುಮಾರ್ ಸ್ವಾಮೀಜಿ ಕಂಚಿನ ಪ್ರತಿಮೆಗೆ 5 ಕೋಟಿ ಅನುದಾನ.
– ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ತರಲು ಚಿಂತನೆ
– ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗೆ ಸಿದ್ದಗಂಗಾ ಶ್ರೀಗಳ ಹೆಸರಲ್ಲಿ ಪ್ರಶಸ್ತಿ
– ಪ್ರತಿ ವಾರ್ಡ್‍ಗಳಲ್ಲಿ 20 ಮಹಿಳೆಯರಿಗೆ ಮೊಪೆಡ್( ಎಲೆಕ್ಟ್ರಿಕ್ ಸ್ಕೂಟಿ) ನೀಡಲು ಚಿಂತನೆ

– ಮಹಿಳೆಯರ ಆರ್ಥಿಕ ಸದೃಡತೆಗೆ ಕಿರು ಸಾಲ ಭಾಗ್ಯ
– ತ್ಯಾಜ್ಯ ವಿಲೇವಾರಿ ಮಾಡುವ ಕಲ್ಲು ಕ್ವಾರಿಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ.
– ಪಿಂಕ್ ಬೇಬಿ ಯೋಜನೆ ವರ್ಷವಿಡಿ ಜಾರಿ.
– ಬಿಬಿಎಂಪಿ ಆಸ್ಪತ್ರೆಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟರ್ ಅಂಬುಲೆನ್ಸ್ ಖರೀದಿ
– ಹೊಸದಾಗಿ ಪಾಲಿಕೆಗೆ ಸೇರಿದ 110 ಹಳ್ಳಿಗಳ ಅಭಿವೃದ್ಧಿಗೆ ಒತ್ತು.
– ವಾರ್ಡ್ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಪಡಿಸಲು ಸಿದ್ದತೆ.
-ಉತ್ತಮ ಆಡಳಿತ ವ್ಯವಸ್ಥೆಗೆ ಏಕ ಕಡತ ನಿರ್ವಹಣೆ ಪದ್ಧತಿ ಜಾರಿ
-ಪಾಲಿಕೆ ಎರಡು ಆಸ್ತಿಗಳನ್ನು ಅಡಮಾನಗೊಳಿಸಲು ಕ್ರಮ
– 2019-20 ಸಾಲಿನಲ್ಲಿ ಆಸ್ತಿ ತೆರಿಗೆ 3500 ಕೋಟಿ ರುಪಾಯಿ ನಿರೀಕ್ಷೆ
– ಟೋಟಲ್ ಸ್ಟೇಷನ್ ಸರ್ವೇ ನಡೆಸಿ ಬೃಹತ್ ಕಟ್ಟಡಗಳಿಂದ 400 ಕೋಟಿ ರೂ. ನಿರೀಕ್ಷೆ
-ಹೊಸ ವಲಯಗಳ ಭೂ ಪರಿವರ್ತನೆಯಾದ ಆಸ್ತಿಗಳಿಂದ 400 ಕೋಟಿ ರೂ. ನಿರೀಕ್ಷೆ
– ಓಎಫ್ ಸಿಯಿಂದ 175 ಕೋಟಿ, ಮೊಬೈಲ್ ಟವರ್ ಗಳಿಂದ 50 ಕೋಟಿ, ನಗರ ಯೋಜನೆ ವಿಭಾಗದಿಂದ 841 ಕೋಟಿ ರೂ ನಿರೀಕ್ಷೆ
– 400 ಸ್ಥಳಗಳಲ್ಲಿ ಉಚಿತ ವೈಫೈ
– ಪಾಲಿಕೆಯ ಸದಸ್ಯರ ವೈದ್ಯಕೀಯ ಅನುದಾನ ನಾಲ್ಕು ಲಕ್ಷದಿಂದ ಆರು ಲಕ್ಷಕ್ಕೆ ಏರಿಕೆ.
– ಪಾಲಿಕೆ ಎಂಟು ವಲಯಗಳಲ್ಲಿ ಟೋಟಲ್ ಸ್ಟೇಷನ್ ಸರ್ವೆಗೆ ಕ್ರಮ.
– ಹಾಲಿ ಮತ್ತು ನಿವೃತ್ತ ಸೈನಿಕರಿಗೆ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿ
– ಆಸ್ತಿ ತೆರಿಗೆಯಿಂದ 3317 ಆದಾಯ ನಿರೀಕ್ಷೆ
– ಆದಾಯ ಹೆಚ್ಚಿಸಲು ಜಾಗೃತದಳ ಸ್ಥಾಪನೆ

– ಪ್ರತಿ ವಾಡ್‍ನ ಎಸಿ-ಎಸ್.ಟಿ ಮತ್ತು ಸ್ಲಂ ಬೋರ್ಡ್ ಅಭಿವೃದ್ಧಿಗೆ 30 ಕೋಟಿ
– ಪೌರಕಾರ್ಮಿಕರ ಬಿಸಿ ಊಟಕ್ಕೆ 12 ಕೋಟಿ
– ಪ್ರತಿ ವಾರ್ಡ್ ಗೆ ಎಸ್ಸಿ-ಎಸಿಗೆ ಹತ್ತು ಮನೆಗಳು
– ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಪ್ರತಿ ವಾರ್ಡ್‍ನಲ್ಲಿ ಐದು ಮನೆ
– ಮಹಾಲಕ್ಷ್ಮಿ ಯೋಜನೆಯಡಿ ಪಿಂಕ್ ಬೇಬಿ ಯೋಜನೆ ವಿಸ್ತರಣೆ.

– ವರ್ಷಪೂರ್ತಿ ಪಾಲಿಕೆ ಹೇರಿಗೆ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಒಂದು ಲಕ್ಷ, ( 60 ಕೋಟಿ ಮೀಸಲು)
-ಮಹಿಳೆಯರಿಗಾಗಿ ಅನ್ನಪೂರ್ಣೇಶ್ವರಿ ಯೋಜನೆ ಜಾರಿ
– ಸ್ವಂತ ಉದ್ಯೋಗಕ್ಕೆ ಸಂಚಾರಿ ವಾಹನ ಸೌಲಭ್ಯ
– ಮಹಿಳೆಯರಿಗಾಗಿ ಆರೋಗ್ಯ ಕವಚ ಯೋಜನೆ ಜಾರಿ
– ಕ್ಯಾನ್ಸರ್ ಕಾಯಿಲೆ ಪತ್ತೆಗೆ ಸಂಚಾರಿ ಬಸ್ ಖರೀಧಿಗೆ ಮೂರು ಕೋಟಿ
– ಕ್ಯಾನ್ಸರ್ ಚಿಕಿತ್ಸಾ ವಿಭಾಗ ಆರಂಬಕ್ಕೆ 50 ಲಕ್ಷ

– ಮಹಿಳಾ ಪಾಲಿಕೆ ಸದಸ್ಯರ ವಾಡ್ರ್ಗಳಿಗೆ ತಲಾ ಹತ್ತು ಲಕ್ಷ ಅನುದಾನ
– ಬಡವರ ಬಂಧು ಯೋಜನೆ ಅಡಿ ಪ್ರತಿ ವಾರ್ಡ್ ಗೆ 15 ತಳ್ಳುವ ಗಾಡಿ
– ನಿರಾಶ್ರಿತರ ತಂಗುದಾನಕ್ಕೆ ಒಂದು ಕೋಟಿ
– ದಿವ್ಯಾಂಗ ಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ 75 ಕೋಟಿ
– ಮಂಗಳಮುಖಿಯರಿಗೆ ವಿಶೇಷ ಕಾರ್ಯಕ್ರಮಕ್ಕೆ ಒಂದು ಕೋಟಿ ಮೀಸಲು
– ಪ್ರತಿ ವಾರ್ಡ್‍ಗೆ 50 ಸೈಕಲ್ ವಿತರಣೆಗೆ 4 ಕೋಟಿ
– ಪ್ರತಿ ವಾರ್ಡ್‍ಗೆ 50 ಟೈಲರಿಂಗ್ ಯಂತ್ರಗಳು
– ಬೀದಿ ವ್ಯಾಪಾರಿಗಳ ಕಲ್ಯಾಣಕ್ಕೆ 25 ಲಕ್ಷ
– ಹಿರಿಯ ನಾಗರಿಕರ ಕಲ್ಯಾಣಕ್ಕೆ 5 ಕೋಟಿ
-ಬಾಬು ಜಗಜೀವನರಾಮ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರೆಯಲು 50 ಲಕ್ಷ ರೂ.
– ಬಿಬಿಎಂಪಿ ಬೆಳಕು ಮಾಸ ಪತ್ರಿಕೆ.
– ಕಸ ವೈಜ್ಞಾನಿಕ ವಿಲೇವಾರಿಗೆ 110 ಕೋಟಿ
– ಆಸ್ತಿಗಳ ಸ್ವತ್ತು ಮತ್ತು ನಿರ್ವಹಣೆಗೆ 55 ಕೋಟಿ
– ತೋಟಗಾರಿಕೆ, ಅರಣ್ಯ ಮತ್ತು ಕೆರೆ ಅಭಿವೃದ್ದಿಗೆ 69 ಕೋಟಿ
– ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿಗೆ 445 ಕೋಟಿ
– ರಾಜಕಾಲುವೆ ಸ್ವಚ್ಛತೆಗೆ 25ಕೋಟಿ
– ಕಾರ್ಡ್‍ರೋಡ್-ಕುರುಬರಳ್ಳಿಯಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಗೆ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಯ ಹೆಸರು ನಾಮಕರಣ ಹಾಗೂ ಕಂಚಿನ ಪುತ್ಥಳಿ ಅನಾವರಣಕ್ಕೆ ತೀರ್ಮಾನ
– ನವಬೆಂಗಳೂರು ಯೋಜನೆಯಡಿ ರಾಜ್ಯ ಸರ್ಕಾರ 8,015 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಪ್ರಸಕ್ತ ವರ್ಷ 2300 ಕೋಟಿ ರೂ.ಗಳನ್ನು ನೀಡಿದೆ.
ಸದರಿ ಅನುದಾನದಲ್ಲಿ ವೈಟ್ ಟಾಪಿಂಗ್,ಕೆರೆ ಅಭಿವೃದ್ದಿ, ಬೃಹತ್ ಮಳೆನೀರು ಕಾಲುವೆಗೆಳ ಅಭಿವೃದ್ದಿ, ಪಾದಚಾರಿ ಮಾರ್ಗಗಳ ಅಭಿವೃದ್ದಿಗೊಳಿಸಲು ತೀರ್ಮಾನ.

– ಬಡ ಹೃದಯರೋಗಿಗಳಿಗೆ ಸ್ಟಂಟ್ ಅಳವಡಿಸಲು 4 ಕೋಟಿ ರೂ.
– ಹೊಸದಾಗಿ ಡಯಾಲಿಸ್ ಕೇಂದ್ರಗಳ ಸ್ಥಾಪನೆಗೆ 25 ಕೋಟಿ ರೂ.
– ಕ್ವಿದಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಣಕ್ಕೆ 5 ಕೋಟಿ ರೂ.
– ವಾಯು ಶುದ್ದೀಕರಣ ಯಂತ್ರ ಅಳವಡಿಕೆಗೆ 5 ಕೋಟಿ ರೂ.
– ತಾಯಿ ಮಡಿಲು ಯೋಜನೆಗೆ ಒಂದೂವರೆ ಕೋಟಿ ರೂ
– ಪ್ರಾಣಿಗಳ ಚಿಕಿತ್ಸಾ ಕೇಂದ್ರಕ್ಕೆ 5 ಕೋಟಿ ರೂ.
– ಬಡಕ್ರೀಡಾಪಟುಗಳಿಗೆ ಒಂದು ಕೋಟಿ ರೂ. ಆರ್ಥಿಕ ಸಹಾಯ
-ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದುಶ್ಚಟ ನಿವಾರಣ ಕೇಂದ್ರ ಆರಂಭಕ್ಕೆ 2 ಕೋಟಿ

# ಬಿಬಿಎಂಪಿ ಬಜೆಟ್‍ನಲ್ಲಿ ಮೇಯರ್ ಫಂಡ್‍ಗೆ 175 ಕೋಟಿ ರೂ ಮೀಸಲು
ಬೆಂಗಳೂರು, ಫೆ.18- ಈ ಬಾರಿ ಮೇಯರ್ ಫಂಡ್‍ಗೆ 175 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಉಪಮೇಯರ್ ವಿವೇಚನೆಗೆ 75 ಕೋಟಿ ರೂ.ಗಳನ್ನು ನೀಡಲಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ವೃಷಭಾವತಿನಗರ ವಾರ್ಡ್‍ನ ಸದಸ್ಯರು, ಮಾಜಿ ಉಪಮಹಾಪೌರರೂ ಆದ ಹೇಮಲತಾ ಗೋಪಾಲಯ್ಯ ಅವರು ಬಿಬಿಎಂಪಿಯ ಪೌರ ಸಭಾಂಗಣದಲ್ಲಿಂದು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದರು.

# ವಿಶೇಷವೇನು ಗೊತ್ತೇ..? 
ಬೆಂಗಳೂರು, ಫೆ.18- ಬೃಹತ್ ಬೆಂಗಳೂರು ನಗರ ಮಹಾನಗರ ಪಾಲಿಕೆಯ 4ನೇ ಬಜೆಟ್ ಇದಾಗಿದೆ. ವಿಶೇಷವೆಂದರೆ ಮೈತ್ರಿ ಆಡಳಿತದಲ್ಲಿ ಒಂದೇ ವಿಧಾನಸಭಾ ಕ್ಷೇತ್ರದ ಸದಸ್ಯರು ಮೂರು ಭಾರಿ ಬಜೆಟ್ ಮಂಡಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್‍ನ ಸದಸ್ಯರೇ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೂರನೇ ಭಾರಿ ಬಜೆಟ್ ಮಂಡಿಸುತ್ತಿರುವುದು ವಿಶೇಷ. ಈ ಮೊದಲು ಶಂಕರಮಠ ವಾರ್ಡ್ ಎಮ್. ಶಿವರಾಜು ಬಜೆಟ್ ಮಂಡಿಸಿದರೆ, ಮಾರಪ್ಪನಪಾಳ್ಯ ವಾರ್ಡ್‍ನ ಸದಸ್ಯರಾದ ಮಹಾದೇವ ಅವರು ಕಳೆದ ಬಾರಿ ಬಜೆಟ್ ಮಂಡಿಸಿದ್ದರು.  ಈ ಬಾರಿ ಮಾಜಿ ಉಪಮಹಾಪೌರರಾದ ವೃಷಬಾವತಿ ನಗರದ ವಾರ್ಡ್ ಸದಸ್ಯರಾದ ಹೇಮಲತಾ ಗೋಪಾಲಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದರು.

ಸ್ವಾಭಾವಿಕವಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಾರ್ಡ್‍ಗಳಿಗೆ ಅವರ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಮೀಸಲಿಡುವುದು ಸಹಜ ಒಂದೇ ಕ್ಷೇತ್ರದ ಮೂವರು ಸದಸ್ಯರು ತೆರಿಗೆ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಜೆಟ್ ಮಂಡಿಸಿರುವ ಹಿನ್ನಲೆಯಲ್ಲಿ ಶಂಕರಮಠ ವಾರ್ಡ್, ಮಾರಪ್ಪನಪಾಳ್ಯ, ವೃಷಭಾವತಿ ನಗರ ವಾರ್ಡ್‍ಗಳಿಗೆ ಹೆಚ್ಚಿನ ಅನುದಾನ ದೊರೆತಿರುವುದರ ಜೊತೆಗೆ ಮಹಾಲಕ್ಷೀ ಲೇಔಟ್ ಸಾಕಷ್ಟು ಅನುದಾನ ಸಿಕ್ಕಿದೆ.

Facebook Comments

Sri Raghav

Admin