ಏರೋ ಇಂಡಿಯೋ-2019 : ಬಾನಂಗಳದಲ್ಲಿ ಆರ್ಭಟಿಸಲು ಸಜ್ಜಾದ ಲೋಹದ ಹಕ್ಕಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.18- ಸಿಲಿಕಾನ್ ಸಿಟಿಯ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಆರ್ಭಟ ಶುರುವಾಗಿದೆ. ಗಾಳಿಯನ್ನು ಸೀಳಿ ಮುನ್ನುಗ್ಗುವ ಸಮರ ವಿಮಾನದಿಂದ ಹಿಡಿದು ಪ್ರಯಾಣಿಕರ ವಿಮಾನ ಹಾಗೂ ಮಿಲಿಟರಿ ವಿಮಾನಗಳು , ಐಷಾರಾಮಿ, ಸಣ್ಣ ವಿಮಾನಗಳು, ಹೆಲಿಕಾಪ್ಟರ್‍ಗಳು ತಮ್ಮ ಚಾಕಚಕ್ಯತೆ ಮತ್ತು ಸಾಮಥ್ರ್ಯವನ್ನು ಪ್ರದರ್ಶಿಸಲು ಯಲಹಂಕ ವಾಯು ನೆಲೆ ಸಜ್ಜಾಗಿದೆ.

ಫೆ.20ರಿಂದ ಫೆ.24ರವರೆಗೆ ನಡೆಯಲಿರುವ ಈ ಏರೋ ಇಂಡಿಯೋ-2019 ವೈಮಾನಿಕ ಪ್ರದರ್ಶನಕ್ಕೆ ಈಗಾಗಲೇ ವಿದೇಶಗಳಿಂದ ರಕ್ಷಣಾ ಕ್ಷೇತ್ರದ ಕಂಪೆನಿಗಳು ಹಾಗೂ ದೇಶೀಯ ಕಂಪೆನಿಗಳು ಈಗಾಗಲೇ ತಮ್ಮ ಉತ್ಪನ್ನಗಳನ್ನು ತಂದಿದ್ದು ಪ್ರದರ್ಶನ ಸಭಾಂಗಣದಲ್ಲಿ ಅವುಗಳನ್ನು ಸಜ್ಜುಗೊಳಿಸುವ ಕಾರ್ಯ ಅಂತಿಮ ಹಂತ ತಲುಪಿದೆ.

ಭಾರತೀಯ ವಾಯು ಪಡೆಗೆ ಐದನೆ ಪೀಳಿಗೆಯ ಯುದ್ಧ ವಿಮಾನಗಳ ಅವಶ್ಯಕತೆಗಳನ್ನು ಮನಗಂಡಿರುವ ಬಹು ರಾಷ್ಟ್ರೀಯ ವೈಮಾನಿಕ ಸಂಸ್ಥೆಗಳು ತಮ್ಮ ಫೈಟರ್ ಜೆಟ್‍ಗಳನ್ನು ಇಲ್ಲಿಗೆ ತಂದು ಅದರ ಸಾಮಥ್ರ್ಯವನ್ನು ಎಲ್ಲರ ಮುಂದೆ ಪ್ರದರ್ಶಿಸಿ ತಮ್ಮ ವ್ಯಾಪಾರ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಿದೆ.

ಪ್ರಯಾಣಿಕರ ವಿಮಾನ ಯಾನ ಸೇವೆಯಲ್ಲಿ ಭಾರೀ ದೈತ್ಯ ಸಂಸ್ಥೆಗಳಾದ ಬೋಯಿಂಗ್, ಏರ್ ಬಸ್, ಬೊಂಬಾಡಿಯರ್ ಸೇರಿದಂತೆ ಹಲವು ಕಂಪೆನಿಗಳು ಈ ಬಾರಿಯೂ ತಮ್ಮ ವಿಮಾನಗಳನ್ನು ತಂದಿದ್ದು , ವ್ಯಾಪಾರ ಕುದುರಿಸಲು ಇಲ್ಲಿನ ದೇಶೀಯ ಹಾಗೂ ವಿದೇಶಿ ವಿಮಾನ ಸಂಸ್ಥೆಗಳ ಜತೆಗೆ ಹೊಸ ಆಫರ್‍ಗಳನ್ನು ನೀಡುತ್ತಿದೆ.

ಭಾರತ ವಾಯು ಪಡೆಗೆ ಈಗಾಗಲೇ ರಫೆಲ್ ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು , ಇದರ ನಡುವೆ ಈಗ ಅಮೆರಿಕದ ಎಫ್-16, ಎಫ್-18 ಪ್ರಮುಖ ಆಕರ್ಷಣೆಯಾಗಲಿದೆ. ಯುರೋ ಫೈಟರ್, ಫ್ರಾನ್ಸ್‍ನ ಡೆಸಾಲ್ಟ್, ಏರ್ ಬಸ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಆ ದೇಶದ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದ ಕಂಪೆನಿಗಳು ಈ ಬಾರಿ ಪಾಲ್ಗೊಳ್ಳುತ್ತಿವೆ.

ಜರ್ಮನಿ, ಇಸ್ರೇಲ್, ಇಟಲಿ, ಜಪಾನ್, ರಷ್ಯಾ , ಕೊರಿಯಾ , ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸ್ವಿಡ್ಜರ್‍ಲ್ಯಾಂಡ್, ಉಕ್ರೇನ್, ಯುಎಇ, ಬ್ರಿಟನ್, ಅಮೆರಿಕ ಸೇರಿದಂತೆ ಒಟ್ಟು 372ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳುತ್ತಿವೆ.

61ಕ್ಕೂ ಹೆಚ್ಚು ವಿಮಾನಗಳು ಪ್ರತಿ ದಿನ ತಮ್ಮ ಪ್ರದರ್ಶನವನ್ನು ನೀಡಲಿದೆ. ಎಚ್‍ಎಎಲ್, ಬಿಎಚ್‍ಇಎಲ್, ಡಿಆರ್‍ಡಿಒ , ಬೆಮೆಲ್ ಸೇರಿದಂತೆ ಹಲವು ದೇಶೀಯ ಕಂಪೆನಿಗಳು ಕೂಡ ಪಾಲ್ಗೊಳ್ಳುತ್ತಿದ್ದು , ರಕ್ಷಣಾ ಇಲಾಖೆ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಇಲಾಖೆ ಭಾರತೀಯ ವಾಯುಪಡೆ ಸೇರಿದಂತೆ ಹಲವು ಸಂಸ್ಥೆಗಳು ಉಸ್ತುವಾರಿ ವಹಿಸಿಕೊಳ್ಳುತ್ತಿದೆ.

ಕಳೆದ ಬಾರಿಗೆ ಹೋಲಿಸಿದರೆ ಪ್ರದರ್ಶನ ಸಭಾಂಗಣಗಳೂ ಕೂಡ ಹೆಚ್ಚಿದ್ದು, ಬಹುತೇಕ ವಾಯು ನೆಲೆಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಹಲವು ದೇಶಗಳಿಂದ ಈಗಾಗಲೇ ರಷ್ಯಾ ಸೇರಿದಂತೆ ಹಲವು ದೇಶಗಳ ರಕ್ಷಣಾ ಸಚಿವರ ತಂಡಗಳು ಭೇಟಿ ನೀಡುತ್ತಿರುವುದರಿಂದ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ.

ಆಯಾ ದೇಶಗಳು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಕೂಡ ಅಣಿಯಾಗಿದೆ. ವಿಶೇಷ ವಿನ್ಯಾಸಗಳ ಕಚೇರಿ ಮಾದರಿಯ ತಾತ್ಕಾಲಿಕ ಸಭಾಂಗಣಗಳನ್ನು ಕೂಡ ನಿರ್ಮಿಸಲಾಗಿದೆ.

WhatsApp Image 2019-02-18 at 10.52.57 AM(1)

WhatsApp Image 2019-02-18 at 10.57.43 AM(1)

WhatsApp Image 2019-02-18 at 11.25.45 AM

Facebook Comments

Sri Raghav

Admin