ಪುಲ್ವಾಮಾ ಉಗ್ರರ ದಾಳಿ ಖಂಡಿಸಿ ವರ್ತಕರಿಂದ ಶಾಂತಿಯುತ ಭಾರತ್ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಫೆ.18- ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಾಗೂ ಹುತಾತ್ಮ ಯೋಧರ ಕುಟುಂಬಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಸಗಟು ಮತ್ತು ಚಿಲ್ಲರೆ ವರ್ತಕರು ಇಂದು ಶಾಂತಿಯುತ ಭಾರತ್ ಬಂದ್ ಆಚರಿಸುತ್ತಿದ್ದಾರೆ.

ಹುತಾತ್ಮ ಯೋಧರ ಗೌರವಾರ್ಥ ದೇಶದ ಬಹುತೇಕ ರಾಜ್ಯಗಳ ವರ್ತಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಶಾಂತಿಯುತ ಪ್ರತಿಭಟನೆ ನಡೆಸಿದರು.

ದೇಶದ ಅನೇಕ ನಗರಗಳ ಮಾರುಕಟ್ಟೆಗಳು ಇಂದು ಬಂದ್ ಆಗಿದ್ದವು ಮಹಾರಾಷ್ಟ್ರ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಮದ್ಯಪ್ರದೇಶ, ಪಶ್ಚಿಮಬಂಗಾಳ, ಉತ್ತರಪ್ರದೇಶ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವರ್ತಕರು ಶಾಂತಿಯುತ ಬಂದ್ ಆಚರಿಸಿದ ವರದಿಯಾಗಿದೆ.

ಭಾರತೀಯ ವರ್ತಕರ ಒಕ್ಕೂಟ(ಸಿಎಐಟಿ) ಕರೆಯ ಮೇರೆಗೆ ಇಂದು ವರ್ತಕರು ಭಾರತ್ ಬಂದ್ ಆಚರಿಸುತ್ತಿದ್ದಾರೆ. ದೇಶಾದ್ಯಂತ ವರ್ತಕರ ವತಿಯಿಂದ ಹಣ ಸಂಗ್ರಹಿಸಿ ಹುತಾತ್ಮ ಯೋಧರ ಕುಟುಂಬಗಳಿಗೆ ನೇರವಾಗಿ ವಿತರಿಸಲಾಗುವುದು ಎಂದು ಸಂಘದ ಮಹಾಕಾರ್ಯದರ್ಶಿ ಪ್ರದೀಪ್ ಖಂಡೇವಾಲಾ ತಿಳಿಸಿದ್ದಾರೆ.

Facebook Comments