ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 1,30,000 ವಿವಿಧ ಹುದ್ದೆಗಳ ಭರ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲು ನಿರ್ಧರಿಸಿದೆ.

ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಖಾಲಿ ಇರುವ 130000 ವಿವಿಧ ಹುದ್ದೆಗಳಾದ  ಕ್ಲರ್ಕ್ಸ್, ಅಕೌಂಟೆಂಟ್ಸ್ ಮತ್ತು ಗೂಡ್ಸ್ ಗಾರ್ಡ್ಸ್  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 28 ಫೆಬ್ರವರಿ 2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 31 ಮಾರ್ಚ್, 2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಕ್ಲರ್ಕ್ಸ್, ಅಕೌಂಟೆಂಟ್ಸ್, ಗೂಡ್ಸ್ ಗಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ 10 ನೇ, 12 ನೇ, ಐಟಿಐ ಅಥವಾ ಅಥವಾ ಅದರ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಸಂಬಂಧಿತ ನೀಡಲಾದ ಪ್ರಮಾಣಪತ್ರ.  2019 ರ ಜುಲೈ 1 ದಿನಾಂಕದಂತೆ 18 ರಿಂದ 32 ವರ್ಷಗಳು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇನ್ನು ಅರ್ಜಿ ಶುಲ್ಕ ಎಸ್ಸಿ / ಎಸ್ಟಿ / ಮಹಿಳಾ / ಪಿಡಬ್ಲ್ಯೂಡಿ ಅರ್ಜಿದಾರರಿಗೆ ರೀತಿಯ 250 / – ಶುಲ್ಕ. ಇತರೆ ಅಭ್ಯರ್ಥಿಗಳಿಗೆ ರೂ. 500 / – ನಿಗದಿಪಡಿಸಲಾಗಿದೆ.

ಲಿಖಿತ ಪರೀಕ್ಷೆ ಮತ್ತು  ಸಂದರ್ಶನವನ್ನು ಆಧರಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ  ಭೇಟಿಕೊಡಿ  http://www.eesanje.com/wp-content/uploads/2019/02/RRB.pdf   (ಈ ಮಾಹಿತಿಯನ್ನು ಇತರರಿಗೂ ಶೇರ್ ಮಾಡಿ)

 

Facebook Comments