ಟಿಎಂಸಿ ಸಂಸದ ಶಂತನು ಸೇನ್‍ಗೆ ಜೀವ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತಾ, ಫೆ.18-ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ ಬೆನ್ನಲ್ಲೇ ಈಗ ಅದೇ ಪಕ್ಷದ ಸಂಸದ ಶಂತನು ಸೇನ್‍ಗೆ ಜೀವ ಬೆದರಿಕೆ ಹಾಕಲಾಗಿದೆ.

ಈ ಸಂಬಂಧ ಟಿಎಂಸಿ ರಾಜ್ಯಸಭಾ ಸದಸ್ಯ ಸೇನ್ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ತಮಗೆ ಅಪರಿಚಿತ ವ್ಯಕ್ತಿಗಳಿಂದ ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕೆಲವು ವಾರಗಳಿಂದ ನಿರಂತರವಾಗಿ ತಮಗೆ ಪೋನ್ ಕರೆಗಳನ್ನು ಮಾಡಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾವು ಪೊಲೀಸರಿಗೆ ದೂರು ನೀಡಿರುವುದಾಗಿ ಸೇನ್ ತಿಳಿಸಿದ್ದಾರೆ.

ಈ ಬೆದರಿಕೆಗಳಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟಿಎಂಸಿಯ ಕೃಷ್ಣಗಂಜ್ ಕ್ಷೇತ್ರದ ಶಾಸಕ ಸತ್ಯಜಿತ್ ಅವರನ್ನು ಫೆ.9ರಂದು ನಾಡಿಯಾ ಜಿಲ್ಲೆಯ ಫೂಲ್‍ಬರಿ ಗ್ರಾಮದಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಪರಾರಿಯಾಗಿದ್ದರು.

Facebook Comments