25ಕ್ಕೂ ಹೆಚ್ಚು ಮೇಕೆಗಳ ನಿಗೂಢ ಸಾವು, ರೈತ ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಫೆ.19-ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಿಗೂಢ ಕಾಯಿಲೆ ಯಿಂದ ಕಳೆದ ಒಂದು ವಾರದಿಂದ ಒಂದೇ ಮನೆಯ 25 ಕ್ಕೂ ಹೆಚ್ಚು ಮೇಕೆಗಳು ಸಾಯುತ್ತಿದ್ದು ರೈತ ಕುಟುಂಬ ಕಂಗಾಲಾಗಿದೆ.

ಗ್ರಾಮದ ನಾರಾಯಣ ಎಂಬುವರಿಗೆ ಸೇರಿದ ಮೇಕೆಗಳು ಸಾಯುತ್ತಿದ್ದು ಪಶು ವೈದ್ಯಾಧಿಕಾರಿಗಳಿಗೆ ಸವಾಲಾಯಾಗಿರುವ ಕಾಯಿಲೆ ಇದ್ದಾಗಿದ್ದು ಪ್ರತಿನಿತ್ಯ 2 ರಿಂದ 3 ಮೇಕೆಗಳು ಸಾಯುತ್ತಿದೆ. ಇದರಿಂದಲೇ ಜೀವನ ಸಾಗಿಸುತ್ತಿದ್ದ ರೈತನಿಗೆ ಕಳೆದ ವಾರದಿಂದ ಸಾಕಷ್ಟು ನಷ್ಟವಾಗಿದ್ದು ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮಂಡ್ಯ ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಪದ್ಮನಾಭ, ಮಂಡ್ಯ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿ ವೀರಭದ್ರಯ್ಯ, ಜಿ.ಪಂ.ಸದಸ್ಯೆ ಸುಷ್ಮಾರಾಜು, ತಾ.ಪಂ ಅಧ್ಯಕ್ಷ ನಾಗೇಶ್, ತಾ.ಪಂ.ಸದಸ್ಯ ಪುಟ್ಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಮೈಕಾಪ್ಲಾಸ್ಮ ಎಂಬ ಕಾಯಿಲೆ ಎಂದು ದೃಢಪಡಿಸಿದ್ದಾರೆ.

ಉಪ ನಿರ್ದೇಶಕ ಡಾ.ಪದ್ಮನಾಭ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮವಾಗಿ ಮೇಕೆಗಳಿಗೆ ಹಬ್ಬಿದ ಕಾಯಿಲೆ ಇದಾಗಿದ್ದು, ಉಳಿಯುವುದು ಅಸಾಧ್ಯ. ಈಗಾಗಲೇ ಈ ಕಾಯಿಲೆ ಹರಡದಂತೆ ಅಗತ್ಯ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು.

ಜಿ.ಪಂ ಸದಸ್ಯೆ ಸುಷ್ಮಾರಾಜು ಮಾತನಾಡಿ, ಕೂಡಲೇ ಪರಿಹಾರ ನೀಡಲು ಜಿ.ಪಂ. ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು.

ಕಂಗಾಲಾಯಾಗಿದ್ದ ರೈತನಿಗೆ ತಾ.ಪಂ ಅಧ್ಯಕ್ಷ ನಾಗೇಶ, ತಾ.ಪಂ ಸದಸ್ಯ ಪುಟ್ಟಸ್ವಾಮಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ ಸೇರಿದಂತೆ ಮತ್ತಿತರರು ಸಾಂತ್ವನ ಹೇಳಿದರು.

Facebook Comments