ಒಂದು ದಿನದ ಕಲೆಕ್ಷನ್ ಮೊತ್ತವನ್ನು ಹುತಾತ್ಮ ಗುರು ಕುಟುಂಬಕ್ಕೆ ನೀಡಿದ ‘ಕರಿಯಪ್ಪ’

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ. ಫೆ. 19 : ಕಳೆದ ಗುರುವಾರ ಪುಲ್ವಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರಯೋಧ ಶ್ರೀ ಗುರು ಅವರ ಕುಟುಂಬದವರನ್ನು ಮಂಗಳವಾರ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ವೇಳೆ ತಬಲಾ ನಾಣಿ ಮಾತನಾಡಿ, ವೀರಯೋಧನನ್ನ ಕಳೆದುಕೊಂಡು ತುಂಬಾ ನೋವಾಗಿದೆ.ನಮ್ಮ ಕೈಲಾದ ಸಹಾಯ ಮಾಡಿದ್ದೀವಿ ಅಂದ್ರು. ನಿರ್ಮಾಪಕ ಡಾ.ಡಿ.ಎಸ್.ಮಂಜುನಾಥ್‌ರಿಗೆ ಮೊದಲಿಂದಲೂ ಸೇನೆ ಮೇಲೆ ಅಪಾರವಾದ ಹೆಮ್ಮೆ. ಈ ಹಿಂದೆ ನಿರ್ಮಾಪಕರೂ ಕೂಡ ಆರ್ಮಿಗೆ ಸೇರೋಕೆ ಹೋಗಿ 2 ರಿಜೆಕ್ಟ್ ಆಗಿ ಬಂದವರು.ಹೀಗಾಗಿ ಅದರ ಮಹತ್ವದ ಅರಿವಿದೆ. ಈ ಹಿಂದೆ ಅವರ ನಿರ್ಮಾಣದ ವೀರಯೋಧರ ಕಥೆಯಿರೋ ಸಂಯುಕ್ತ 2 ಚಿತ್ರದ ಒಂದು ದಿನದ ಸಂಭಾವನೆಯನ್ನೂ ಯೋಧರಿಗೆ ಕೊಟ್ಟಿದ್ರು. ಈಗಲೂ ಇದು ಅಳಿಲುಸೇವೆ ಅಂತಾ ಈ ಧನಸಹಾಯ ಮಾಡಿದ್ದಾರೆ ಎಂದರು .

ಇನ್ನು ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ನಗಿಸುತ್ತಲೇ ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುವ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಬಗ್ಗೆ ಪ್ರೇಕ್ಷರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ.

ಎಂ ಸಿರಿ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಡಾ. ಮಂಜುನಾಥ್‌ ಡಿ ಎಸ್‌ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಂದನ್‌ ಆಚಾರ್‌, ಸಂಜನಾ ಆನಂದ್‌, ಅಪೂರ್ವ, ತಬಲಾ ನಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಕುಮಾರ್‌ ನಿರ್ದೇಶನ ಮಾಡಿದ್ದಾರೆ.  ಸಿನಿಮಾದಲ್ಲಿರುವ ಮೆಸೇಜ್‌ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್‌ ಇರುವುದು ವರ್ಕೌಟ್‌ ಆಗಿದೆ.

Facebook Comments

Sri Raghav

Admin